Home Business Trump Threatens: ಯುರೋಪಿಯನ್ ಒಕ್ಕೂಟದ ಸರಕುಗಳಿಗೆ 50% Tariff

Trump Threatens: ಯುರೋಪಿಯನ್ ಒಕ್ಕೂಟದ ಸರಕುಗಳಿಗೆ 50% Tariff

US President Donald Trump

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುರೋಪಿಯನ್ ಒಕ್ಕೂಟದ (EU) 27 ರಾಷ್ಟ್ರಗಳ ಸರಕುಗಳ ಮೇಲೆ ಜೂನ್ 1ರಿಂದ ಜುಲೈ 9ರವರೆಗೆ 50% ಸುಂಕ (Tariffs) ಹಾಕಬಹುದು ಎಂದು ಶುಕ್ರವಾರ ಬೆದರಿಕೆ ಹಾಕಿದರು.

ಟ್ರಂಪ್ ಅವರು EU ಜೊತೆ ಮಾತುಕತೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. EU ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್, ಟ್ರಂಪ್ ಅವರಿಗೆ ಗಂಭೀರವಾಗಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ.

ಟ್ರಂಪ್ ಅವರು ಭಾನುವಾರ ಮಾಧ್ಯಮಗಳಿಗೆ ಹೇಳಿದರು, “ನಾನು ಈಗಾಗಲೇ ಅವರಿಗೆ ಒಪ್ಪಂದ ಮಾಡಲು ಹೇಳಿದ್ದೇನೆ. ನಾವು ಬೇಗನೆ ಸಭೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ.”

ಲೇಯೆನ್ ಅವರು ಕೂಡ EU–US ನಡುವಿನ ವ್ಯಾಪಾರ ಸಂಬಂಧ ಅತ್ಯಂತ ಪ್ರಮುಖವೆಂದು ಹೇಳಿ, ಜುಲೈ 9ರವರೆಗೆ ಸಮಗ್ರ ಒಪ್ಪಂದ ಮಾಡಲು ಸಮಯ ಬೇಕಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ, ಸುಂಕ ವಿನಾಯಿತಿ ಜುಲೈ 9ರವರೆಗೆ ವಿಸ್ತಾರವಾಗಿರುವುದಾಗಿ ತಿಳಿಸಿದ್ದಾರೆ.

ಯುರೋಪ್ ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಮಾತುಕತೆಗಳನ್ನು ಮುಂದುವರಿಸಲು ಸಿದ್ಧವಾಗಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಸಮಗ್ರವಾಗಿ ಚರ್ಚಿಸಿ ಫಲಪ್ರದವಾದ ಒಪ್ಪಂದಕ್ಕೆ ಬರಲು ನಮಗೆ ಜುಲೈ 9 ರವರೆಗೆ ಸಮಯ ಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version