
Washington: ಆ್ಯಪಲ್ (Apple) ಕಂಪನಿಯ CEO ಟಿಮ್ ಕುಕ್ (Tim Cook) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಯಾವ ವಿಚಾರ ಚರ್ಚೆಯಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅಮೆರಿಕ ಸರ್ಕಾರ ಚೀನಾದ ಸರಕುಗಳ ಮೇಲೆ 10% ಸುಂಕ ವಿಧಿಸಿರುವುದರಿಂದ ಈ ವಿಷಯವೇ ಚರ್ಚೆಯ ಮುಖ್ಯಾಂಶವಾಗಿರಬಹುದೆಂದು ಹೇಳಲಾಗುತ್ತಿದೆ.
ಆ್ಯಪಲ್ ಉತ್ಪನ್ನಗಳ ಶೇಕಡಾ 90ಕ್ಕಿಂತಲೂ ಹೆಚ್ಚಿನವು ಚೀನಾದಲ್ಲಿ ತಯಾರಾಗುತ್ತದೆ, ಆದರೆ ಅದೇ ಸಮಯದಲ್ಲಿ ಅಮೆರಿಕ ಆ್ಯಪಲ್ ಗೆ ದೊಡ್ಡ ಮಾರುಕಟ್ಟೆ. ಅಮೆರಿಕ-ಚೀನಾ ವ್ಯಾಪಾರ ಘರ್ಷಣೆಯಿಂದ ಆ್ಯಪಲ್ ಹೆಚ್ಚು ತೀವ್ರವಾಗಿ ಪ್ರಭಾವಿತವಾಗುವ ಸಾಧ್ಯತೆ ಇದೆ.
ಚೀನಾ ಸರ್ಕಾರ ಆ್ಯಪಲ್ ಕಂಪನಿಯ ಆ್ಯಪ್ ಡೆವಲಪರ್ಸ್‌ಗೆ ವಿಧಿಸಿರುವ ಶುಲ್ಕ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಖೆ ನಡೆಸಲು ಯೋಜಿಸುತ್ತಿದೆ. ಇದರಿಂದ ಚೀನಾದಲ್ಲೂ ಆ್ಯಪಲ್ ಗೆ ಸಂಕಷ್ಟ ಎದುರಾಗಬಹುದು.
ತಮ್ಮ ಮುಂಚಿನ ಅವಧಿಯಲ್ಲಿ ಟ್ರಂಪ್ ಐಫೋನ್ ಗಳ ಆಮದಿಗೆ ಸುಂಕ ರಿಯಾಯಿತಿ ನೀಡಿದ್ದರು. ಆದರೆ, ಈ ಬಾರಿ ಅವರು ಯಾವುದೇ ವಿನಾಯಿತಿಯನ್ನು ನೀಡಲು ಸಿದ್ಧರಿಲ್ಲ.
ಆ್ಯಪಲ್ ತನ್ನ ಐಫೋನ್ ಗಳಲ್ಲಿ encryption ಬಲಪಡಿಸಿರುವುದು ಅಮೆರಿಕ ಸರ್ಕಾರಕ್ಕೆ ಅಸಮಾಧಾನ ತಂದಿದೆ. ಐಫೋನ್‌ನ ಡಾಟಾ ಡೀಕ್ರಿಪ್ಟ್ ಮಾಡುವಂತೆ ಹಲವು ದೇಶಗಳ ಸರ್ಕಾರಗಳು ಆಗ್ರಹಿಸಿದರೂ, ಗ್ರಾಹಕರ ಗೌಪ್ಯತೆ ಕಾಪಾಡಲು ಆ್ಯಪಲ್ ಇದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಈ ವಿಷಯದಲ್ಲೂ ಟ್ರಂಪ್ ಮತ್ತು ಆ್ಯಪಲ್ ನಡುವೆ ಒತ್ತಡ ಇರುವ ಸಾಧ್ಯತೆ ಇದೆ.