Home News Trump ವಿರುದ್ಧ Elon Musk: ಬಿಕ್ಕಟ್ಟಿನ ಹಿಂದಿನ ನಾಟಕ

Trump ವಿರುದ್ಧ Elon Musk: ಬಿಕ್ಕಟ್ಟಿನ ಹಿಂದಿನ ನಾಟಕ

250
Elon Musk

Washington: ಒಮ್ಮೆ ಟ್ರಂಪ್‌ರನ್ನು ಬೆಂಬಲಿಸಿದ್ದ ಎಲಾನ್ ಮಸ್ಕ್, (Elon Musk) ಈಗ ಅವರ ವಿರುದ್ಧವಾಗಿದ್ದಾರೆ. ಈಗ ಅವರು ಟ್ರಂಪ್ (Trump ) ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿ, ಜೆಡಿ ವ್ಯಾನ್ಸ್‌ರನ್ನು ಮುಂದಿನ ನಾಯಕನಾಗಿಸಬೇಕೆಂದು ಹೇಳುತ್ತಿದ್ದಾರೆ.

ಇತ್ತೀಚೆಗೆ ಟ್ರಂಪ್ ಮಂಡಿಸಿದ ಹೊಸ ತೆರಿಗೆ ಮಸೂದಿಯನ್ನು ಮಸ್ಕ್ ತೀವ್ರವಾಗಿ ಟೀಕಿಸಿದ್ದಾರೆ. ಅದು ವ್ಯರ್ಥ ವೆಚ್ಚ ಮತ್ತು ಸರ್ಕಾರದ ಹಣವನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ. ಅವರ ಟೀಕೆಯಿಂದ ಕೋಪಗೊಂಡ ಟ್ರಂಪ್, ‘ಮಸ್ಕ್ ಮಸೂದೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರು, ಆದರೆ ವಿದ್ಯುತ್ ವಾಹನಗಳ ಸಬ್ಸಿಡಿಯನ್ನು ಕಡಿತಗೊಳಿಸುವ ವಿಷಯ ಬಂದಾಗ, ಅವರಿಗೆ ಸಮಸ್ಯೆ ಇತ್ತು’ ಎಂದು ಪ್ರತಿಕ್ರಿಯಿಸಿದರು.

ಇದರ ಜೊತೆಗೆ, ಮಸ್ಕ್‌ ಟ್ರಂಪ್‌ ವಿರುದ್ಧ ಸೆಕ್ಸ್ ಅಪರಾಧಿ ಜೆಫ್ರಿ ಎಪ್ಸ್ಟೀನ್‌ ಸಂಬಂಧಿತ ಫೈಲ್‌ಗಳಲ್ಲಿರುವ ಹೆಸರು ಕುರಿತು ಮಾತನಾಡಿದ್ದು ವಿವಾದವನ್ನು ಇನ್ನಷ್ಟು ಗಂಭೀರವಾಗಿಸಿದೆ.

ಮತ್ತೊಂದೆಡೆ, ಸಾಮಾಜಿಕ ಜಾಲತಾಣ ‘X’ನಲ್ಲಿ ಮಸ್ಕ್, “ಟ್ರಂಪ್‌ರನ್ನು ತೆಗೆದು ಜೆಡಿ ವ್ಯಾನ್ಸ್‌ರನ್ನು ತರೋಣ” ಎಂಬ ಪೋಸ್ಟ್‌ಗೆ ಬೆಂಬಲ ವ್ಯಕ್ತಪಡಿಸಿ, “ಹೌದು” ಎಂದು ಉತ್ತರಿಸಿದ್ದಾರೆ. ಇದರಿಂದಾಗಿ ಅವರ ವಾಗ್ದಾಳಿ ಬಹಿರಂಗವಾಗಿದೆ.

ಈ ಹಿನ್ನಲೆಯಲ್ಲಿ, ಟ್ರಂಪ್ ಕೂಡ ಮಸ್ಕ್ ಕಂಪನಿಗಳ ಮೇಲೆ ಪ್ರತೀಕಾರ ತೋರಿಸುತ್ತಿದ್ದಾರೆ. ಅವರು ಸ್ಪೇಸ್‌ಎಕ್ಸ್‌ಗೆ ಸರಕಾರ ನೀಡಿರುವ ಒಪ್ಪಂದಗಳನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಮಸ್ಕ್ ಇದಕ್ಕೆ ಪ್ರತಿಯಾಗಿ, “ಡ್ರ್ಯಾಗನ್ ಬಾಹ್ಯಾಕಾಶ ನೌಕೆ ತಾತ್ಕಾಲಿಕ ಸ್ಥಗಿತ” ಎಂಬ ಘೋಷಣೆಯನ್ನು ಮಾಡಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page