Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (Trump) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ (Putin) ಕಿಡಿಕಾರಿದ್ದಾರೆ. “ಉಕ್ರೇನ್ ಜತೆ ಯುದ್ಧ ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
2022ರಲ್ಲಿ ಪ್ರಾರಂಭವಾದ ಉಕ್ರೇನ್-ರಷ್ಯಾ ಯುದ್ಧ ಇನ್ನೂ ಅಂತ್ಯ ಕಂಡಿಲ್ಲ. ಅನೇಕ ದೇಶಗಳು ಮಧ್ಯಸ್ಥಿಕೆ ಯತ್ನಿಸಿದರೂ, ಯುದ್ಧ ವಿರಾಮಕ್ಕೆ ಒಪ್ಪಂದ ಆಗಿಲ್ಲ. ಆಗಸ್ಟ್ 15ರಂದು ಅಮೆರಿಕದ ಅಲಾಸ್ಕಾದಲ್ಲಿ ಪುಟಿನ್ ಮತ್ತು ಟ್ರಂಪ್ ಭೇಟಿಯಾಗಿ ಯುದ್ಧ ನಿಲ್ಲಿಸುವ ಬಗ್ಗೆ ಚರ್ಚಿಸಲಿದ್ದಾರೆ. ಈ ವೇಳೆ ಭೂ ವಿನಿಮಯ ವಿಚಾರವೂ ಬರಬಹುದಾದರೂ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅದನ್ನು ತಿರಸ್ಕರಿಸಿದ್ದಾರೆ.
ಟ್ರಂಪ್ ಯುರೋಪಿಯನ್ ನಾಯಕರೊಂದಿಗೆ ವರ್ಚುವಲ್ ಸಭೆ ನಡೆಸಿದ್ದು, ಅಮೆರಿಕ ಕದನ ವಿರಾಮ ಬಯಸುತ್ತದೆ ಎಂದು ಹೇಳಿದ್ದಾರೆ. ಝೆಲೆನ್ಸ್ಕಿ, ಪುಟಿನ್ ಸುಳ್ಳು ಹೇಳುತ್ತಿದ್ದಾರೆ ಹಾಗೂ ಉಕ್ರೇನ್ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದಾಗ್ಯೂ, ಟ್ರಂಪ್ ಯಾವ ರೀತಿಯ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಯುದ್ಧಕ್ಕೆ ಮಾಜಿ ಅಧ್ಯಕ್ಷ ಜೋ ಬೈಡನ್ ಕಾರಣ ಎಂದು ಟ್ರಂಪ್ ಆರೋಪಿಸಿ, “ನಾನು ಅಧ್ಯಕ್ಷನಾಗಿದ್ದರೆ, ಇದು ನಡೆಯುತ್ತಿರಲಿಲ್ಲ” ಎಂದು ಹೇಳಿದ್ದಾರೆ.