ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು “ಬಾಂಗ್ಲಾದೇಶ (Bangladesh) ಬಿಕ್ಕಟ್ಟಿನಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ, ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Modi) ನಿರ್ವಹಿಸುತ್ತಾರೆ” ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶದ ಸ್ಥಿತಿಗತಿ ಕುರಿತ ನಿರ್ಧಾರವನ್ನು ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಶೇಖ್ ಹಸೀನಾ ಸರ್ಕಾರದ ಪತನದ ಬಳಿಕ ಬಾಂಗ್ಲಾದೇಶದಲ್ಲಿ ಅರಾಜಕತೆ ಮುಂದುವರೆದಿದೆ. ಜಿಹಾದಿ ಶಕ್ತಿಗಳು ತಲೆ ಎತ್ತುತ್ತಿರುವ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭದ್ರತಾ ಆತಂಕ ಹೆಚ್ಚಾಗಿದೆ. ಹಿಂದಿನ ಬೈಡನ್ ಆಡಳಿತವು ಬಾಂಗ್ಲಾದೇಶದ ಬಗ್ಗೆ ವಿದೇಶಾಂಗ ನೀತಿಯಲ್ಲಿ ಪ್ರಭಾವ ಬೀರಿದ್ದರಿಂದ, ಇದು ಟ್ರಂಪ್ ಅವರ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ವಾಷಿಂಗ್ಟನ್‌ನಲ್ಲಿ ಭಾರತ-ಅಮೆರಿಕಾ ವ್ಯಾಪಾರ ಸಂಬಂಧಗಳ ಕುರಿತು ನಡೆದ ಚರ್ಚೆಯಲ್ಲಿ ಟ್ರಂಪ್, “ನಾನು ಬಾಂಗ್ಲಾದೇಶದ ವಿಚಾರವನ್ನು ಮೋದಿಗೆ ಬಿಡುತ್ತೇನೆ” ಎಂದು ಸ್ಪಷ್ಟಪಡಿಸಿದರು. ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರಕ್ಕೆ ಅವರ ಆಡಳಿತವು ಯಾವುದೇ ಸಹಾಯ ನೀಡದಿದ್ದುದನ್ನು ಅವರು ಪುನರುಚಿಸಿದರು.
ಟ್ರಂಪ್ ಅವರು ಭಾರತದೊಂದಿಗೆ ಹೊಸ ವ್ಯಾಪಾರ ಒಪ್ಪಂದವನ್ನು ಘೋಷಿಸಿದರು. ಈ ಒಪ್ಪಂದದಡಿ ಭಾರತವು ಅಮೆರಿಕದಿಂದ ಹೆಚ್ಚುವರಿ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ, ಇದರಿಂದ ನವದೆಹಲಿಯ ವ್ಯಾಪಾರ ಕೊರತೆ ಕಡಿಮೆಯಾಗಲಿದೆ.
ರಷ್ಯಾ-ಉಕ್ರೇನ್ ಯುದ್ಧದ ಕುರಿತು ಪ್ರಧಾನಿ ಮೋದಿ, “ಅಧ್ಯಕ್ಷ ಟ್ರಂಪ್ ಶಾಂತಿ ಪುನಃಸ್ಥಾಪಿಸಲು ಕ್ರಮ ತೆಗೆದುಕೊಳ್ಳುತ್ತಿರುವುದು ಸಂತೋಷಕರ” ಎಂದು ಪ್ರತಿಕ್ರಿಯಿಸಿದರು. ಪತಿನ್ ಅವರೊಂದಿಗೆ ನಡೆದ ಮಾತುಕತೆಯನ್ನು ಉಲ್ಲೇಖಿಸಿ, “ಭಾರತ ತಟಸ್ಥವಲ್ಲ, ಶಾಂತಿಯ ಪರವಾಗಿದೆ” ಎಂದು ಮೋದಿ ಹೇಳಿದರು. ಅವರು “ಯುದ್ಧದ ಸಮಯವಲ್ಲ, ಪರಿಹಾರ ಚರ್ಚೆಯ ಮೂಲಕ ಸಿಗಬೇಕು” ಎಂಬುದಾಗಿ ತಮ್ಮ ನಿಲುವು ವಿವರಿಸಿದರು.