back to top
27.7 C
Bengaluru
Saturday, August 30, 2025
HomeNewsTrump's Tariff Order: ಭಾರತ, ಕೆನಡಾ ಸೇರಿ ಹಲವು ದೇಶಗಳಿಗೆ ಪರಿಣಾಮ

Trump’s Tariff Order: ಭಾರತ, ಕೆನಡಾ ಸೇರಿ ಹಲವು ದೇಶಗಳಿಗೆ ಪರಿಣಾಮ

- Advertisement -
- Advertisement -

New York: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ಸುಮಾರು 70 ದೇಶಗಳ ಮೇಲೆ ಹೊಸ ಆಮದು ಸುಂಕಗಳನ್ನು (Trump’s tariff order) ವಿಧಿಸಿರುವ ಹೊಸ ಆದೇಶ ಹೊರಡಿಸಿದ್ದಾರೆ. ಈ ಸುಂಕದ ತಿದ್ದುಪಡಿ ಆ.7ರಿಂದ ಜಾರಿಯಲ್ಲಿಗೆ ಬರಲಿದೆ.

ಭಾರತ: ಟ್ರಂಪ್ ಭಾರತದಿಂದ ರಷ್ಯಾ ಇಂಧನ ಮತ್ತು ಯುದ್ಧೋಪಕರಣಗಳನ್ನು ಖರೀದಿಸುತ್ತಿದೆ ಎಂದು ಆರೋಪಿಸಿದ್ದು, ಇದರ ಪರಿಣಾಮವಾಗಿ ಶೇ.25ರಷ್ಟು ಸುಂಕ ವಿಧಿಸಲಾಗಿದೆ. ಆದರೆ, ಯಾವುದೇ ದಂಡದ ಉಲ್ಲೇಖವಿಲ್ಲ.

ಕೆನಡಾ: ಕೆನಡಾದ ಮೇಲೆ ಶೇ.25ರಿಂದ 35ರಷ್ಟು ಸುಂಕ ಹೆಚ್ಚಿಸಲಾಗಿದೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಪ್ಯಾಲೆಸ್ತೈನ್‌ಗೆ ಬೆಂಬಲಿಸಿದ ಬಳಿಕ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದರು. “ಕೆನಡಾ ಜೊತೆ ವ್ಯಾಪಾರ ಕಷ್ಟ,” ಎಂದೂ ಹೇಳಿದ್ದಾರೆ.

ಮೆಕ್ಸಿಕೋ: ಟ್ರಂಪ್ ಈ ದೇಶದ ಮೇಲೆ ಸುಂಕ ವಿಧಿಸುವ ನಿರ್ಧಾರವನ್ನು 90 ದಿನಗಳ ಕಾಲ ಮುಂದೂಡಿದ್ದಾರೆ. ಮೆಕ್ಸಿಕೋ ಅಧ್ಯಕ್ಷರ ಜೊತೆಗಿನ ಮಾತುಕತೆಯ ಬಳಿಕ ತಾತ್ಕಾಲಿಕ ತೀರ್ಮಾನ ಕೈಗೊಂಡಿದ್ದಾರೆ.

ದಕ್ಷಿಣ ಕೊರಿಯಾ: ಈ ಹಿಂದೆ ಶೇ.25ರಷ್ಟು ಇದ್ದ ಸುಂಕವನ್ನು ಶೇ.15ಕ್ಕೆ ಇಳಿಸಲಾಗಿದ್ದು, ಅಮೆರಿಕ-ಕೊರಿಯಾ ನಡುವಿನ ಒಪ್ಪಂದದಿಂದಾಗಿ ಈ ಬದಲಾವಣೆ ಆಗಿದೆ. ಟ್ರಂಪ್ ಅವರು ದ.ಕೊರಿಯಾದಿಂದ ಎಲ್ಎನ್ಜಿ ಸೇರಿದಂತೆ ಇಂಧನ ಸಂಪನ್ಮೂಲ ಖರೀದಿಸುವುದಾಗಿ ತಿಳಿಸಿದ್ದಾರೆ.

ಬ್ರೆಜಿಲ್: ಬ್ರೆಜಿಲ್ ಮೇಲೆ ಮೊದಲಿಗೆ ಶೇ.50ರಷ್ಟು ಸುಂಕ ವಿಧಿಸಿದ್ದರೂ, ಕೆಲ ಉತ್ಪನ್ನಗಳಿಗೆ (ಕಿತ್ತಳೆ ರಸ, ವಿಮಾನಗಳು) ವಿನಾಯಿತಿ ನೀಡಲಾಗಿದೆ. ಈ ಕ್ರಮವನ್ನು ಕೆಲವುವರು ರಾಜಕೀಯ ಪ್ರೇರಿತ ಎಂದಿದ್ದಾರೆ.

  • ಜಪಾನ್, ಸಿರಿಯಾ ಮತ್ತು ಯುರೋಪಿಯನ್ ಒಕ್ಕೂಟ
  • ಜಪಾನ್ ಮತ್ತು ಯುರೋಪಿಯನ್ ಒಕ್ಕೂಟದ ಮೇಲೆ ಶೇ.15ರಷ್ಟು ಸುಂಕ
  • ಸಿರಿಯಾದ ಮೇಲೆ ಶೇ.41ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿದೆ

ಟ್ರಂಪ್ ಅವರ ಈ ಹೊಸ ಸುಂಕ ತೀರ್ಮಾನದಿಂದ ಹಲವಾರು ದೇಶಗಳೊಂದಿಗೆ ಅಮೆರಿಕದ ವ್ಯಾಪಾರ ಸಂಬಂಧಗಳಿಗೆ ಪರಿಣಾಮ ಬೀರಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page