Search
WhatsApp alerts

Home › Karnataka

Tungabhadra Dam–ಹೊಸ ಗೇಟ್ ಕೆಲಸ ಪ್ರಗತಿಯಲ್ಲಿದೆ, ಎರಡನೇ ಬೆಳೆಗಾಗಿ ನೀರಿಲ್ಲ

administrator · Published

DCM D.K. Shivakumar

Bengaluru: ತುಂಗಭದ್ರಾ ಅಣೆಕಟ್ಟೆಯ (Tungabhadra Dam) 33 ಗೇಟ್‌ಗಳನ್ನು ಬದಲಾಯಿಸಲು ಮಂಡಳಿ ಟೆಂಡರ್ ಕರೆದಿದೆ. ಗುತ್ತಿಗೆ ಅಹಮದಾಬಾದ್ ಕಂಪನಿಗೆ ನೀಡಲಾಗಿದೆ. ಈಗಾಗಲೇ ಆರು ಗೇಟ್‌ಗಳ ತಯಾರಿ ಕೆಲಸ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಅಗತ್ಯವಾದ ಸಾಮಗ್ರಿ ಬರುತ್ತಿದೆ. ಗದಗ ಹಾಗೂ ಹೊಸಪೇಟೆಯಲ್ಲಿ ಗೇಟ್‌ಗಳ ತಯಾರಿ ನಡೆಯುತ್ತಿದೆ. ಜಿಂದಾಲ್ ಕಂಪನಿಯೂ ಸಹಕಾರ ನೀಡುತ್ತಿದೆ. ಆಂಧ್ರದ ಎಂಜಿನಿಯರ್‌ಗಳಿಗೆ ಕೆಲಸ ಬೇಗ ಮುಗಿಸಲು ಸೂಚನೆ ನೀಡಲಾಗಿದೆ. ಬೇರೆ ಕಂಪನಿಗಳಿಗೆ ಸಹ ಅವಕಾಶ ನೀಡಿ ಕೆಲಸ ವೇಗಗೊಳಿಸಲಾಗುತ್ತಿದೆ ಎಂದರು.

ಅಣೆಕಟ್ಟೆಯ ಸುರಕ್ಷತೆಗಾಗಿ ಕೇವಲ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸಬೇಕು. ಆದ್ದರಿಂದ ಈ ವರ್ಷ ಎರಡನೇ ಬೆಳೆಗಾಗಿ ನೀರು ಬಿಡಲು ಸಾಧ್ಯವಿಲ್ಲ. ನೀರು ಬಿಡಿದರೆ ಗೇಟ್ ಅಳವಡಿಸುವುದು ಅಸಾಧ್ಯ. ರೈತರು ಚಿಂತೆಯಲ್ಲಿ ಇದ್ದಾರೆ. ಕುಡಿಯುವ ನೀರು ಹಾಗೂ ಕೈಗಾರಿಕೆಗಳಿಗೆ ಮಾತ್ರ ನೀರು ಬಿಡಲಾಗುತ್ತದೆ ಎಂದರು.

ದುರಸ್ತಿ ವೆಚ್ಚದಲ್ಲಿ ಕರ್ನಾಟಕವು 66% ಹೊಣೆ ಹೊತ್ತುಕೊಳ್ಳಬೇಕು, ಆಂಧ್ರ ಮತ್ತು ತೆಲಂಗಾಣವು 33% ನೀಡಬೇಕು. ಆದರೆ ಆಂಧ್ರ ಹಣ ಕೊಟ್ಟಿಲ್ಲ. ಅವರ ಪಾಲಿನ ಹಣವನ್ನೂ ನಾವು ಕೊಡಲು ಸಿದ್ಧರಾಗಿದ್ದೇವೆ. ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಕರ್ನಾಟಕವೇ ಹಣ ನೀಡಲು ಮುಂದಾಗಿದೆ ಎಂದರು.

ಅಣೆಕಟ್ಟಿನಲ್ಲಿ ಹೂಳಿನ ಕಾರಣದಿಂದ ಸಂಗ್ರಹ ಸಾಮರ್ಥ್ಯ 105 ಟಿಎಂಸಿಗೆ ಕುಸಿದಿದೆ. ಅದಕ್ಕಾಗಿ ನವಿಲೆ ಬಳಿ ಹೊಸ ಸಮತೋಲಿತ ಅಣೆಕಟ್ಟೆ ನಿರ್ಮಾಣಕ್ಕೆ 11 ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಇದಕ್ಕೆ ಅನುಮೋದನೆಗಾಗಿ ಮಂಡಳಿಗೆ ಪ್ರಸ್ತಾಪ ಕಳುಹಿಸಲಾಗಿದೆ, ಆದರೆ ಪ್ರತಿಕ್ರಿಯೆ ಬಂದಿಲ್ಲ. ಆಂಧ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಮಾಡಿದ ಪ್ರಯತ್ನವೂ ವಿಫಲವಾಗಿದೆ ಎಂದರು.

ರಾಜ್ಯದ ಎಲ್ಲಾ ಅಣೆಕಟ್ಟುಗಳ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗಿದೆ. ಗೇಟ್‌ಗಳ ಆಯುಷ್ಯ ಸಾಮಾನ್ಯವಾಗಿ 50 ವರ್ಷ. ಕಳೆದ ವರ್ಷ 19ನೇ ಗೇಟ್ ಕಳಚಿಬಿದ್ದು ತೊಂದರೆಯಾಯಿತು, ಆದರೆ ತಕ್ಷಣ ತಾತ್ಕಾಲಿಕ ಗೇಟ್ ಅಳವಡಿಸಿ ಅನಾಹುತ ತಪ್ಪಿಸಲಾಯಿತು.

ಬಜಾಲ್ ಸಮಿತಿ ಎಲ್ಲಾ ಗೇಟ್‌ಗಳನ್ನು ತಕ್ಷಣ ಬದಲಾಯಿಸುವಂತೆ ಶಿಫಾರಸು ಮಾಡಿದೆ. ಎಲ್ಲಾ ಗೇಟ್‌ಗಳನ್ನು ಬದಲಿಸಲು ಕನಿಷ್ಠ 8 ತಿಂಗಳು ಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಹೇಳಿದರು.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page