ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ ಫೆಬ್ರವರಿ ತಿಂಗಳ ಒಟ್ಟಾರೆ ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, 4,03,976 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. 2024ರಲ್ಲಿ ಇದೇ ಅವಧಿಯಲ್ಲಿ 3,68,424 ಯುನಿಟ್ ಮಾರಾಟವಾಗಿತ್ತು, ಶೇಕಡಾ 10% ವೃದ್ಧಿ ಸಾಧಿಸಿದೆ.
ಟಿವಿಎಸ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಭಾರೀ ಬೆಳವಣಿಗೆ ಕಂಡುಬಂದಿದೆ. ಫೆಬ್ರವರಿ 2025ರಲ್ಲಿ 24,017 ಯುನಿಟ್ ಮಾರಾಟವಾಗಿದ್ದು, 2024ರಲ್ಲಿ 17,959 ಯುನಿಟ್ ಮಾರಾಟವಾಗಿದ್ದರಿಂದ ಶೇಕಡಾ 34% ಬೆಳವಣಿಗೆ ಕಂಡಿದೆ.
ಟಿವಿಎಸ್ ಐಕ್ಯೂಬ್ ಈ ಯಶಸ್ಸಿಗೆ ಪ್ರಮುಖ ಕಾರಣ. ಇದರ ಬೆಲೆ ₹1.07 ಲಕ್ಷದಿಂದ ₹1.37 ಲಕ್ಷವರೆಗೆ ಇದೆ. 75-150 ಕಿಮೀ ಮೈಲೇಜ್ ನೀಡುವ ಈ ಸ್ಕೂಟರ್ 75-82 ಕೆಎಂಪಿಹೆಚ್ ವೇಗವನ್ನು ಪಡೆಯುತ್ತದೆ. 7-ಇಂಚು TFT ಸ್ಕ್ರೀನ್, ವಾಯ್ಸ್ ಅಸಿಸ್ಟ್, ಟಿಪಿಎಂಎಸ್, ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ.
₹2.50 ಲಕ್ಷ ಬೆಲೆಯಲ್ಲಿ ಬಿಡುಗಡೆಯಾದ ಟಿವಿಎಸ್ ಎಕ್ಸ್ 140 ಕಿಮೀ ರೇಂಜ್ ಹೊಂದಿದೆ. 105 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿರುವ ಈ ಸ್ಕೂಟರ್ ಕೇವಲ 2.6 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗವನ್ನು ತಲುಪುತ್ತದೆ. 10.25-ಇಂಚಿನ TFT ಕನ್ಸೋಲ್, ಕ್ರೂಸ್ ಕಂಟ್ರೋಲ್, ನ್ಯಾವಿಗೇಷನ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟಿವಿಎಸ್ ಐಕ್ಯೂಬ್ ಹಾಗೂ ಟಿವಿಎಸ್ ಎಕ್ಸ್ ಗೆ ಗ್ರಾಹಕರ ಬೆಂಬಲ ಹೆಚ್ಚುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಓಲಾ ಮತ್ತು ಬಜಾಜ್‌ನ್ನು ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ!