TVS ರೈಡರ್ 125 (TVS Raider 125 iGo) ಅನ್ನು ಹೊಸ ಆವೃತ್ತಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಬೈಕ್ನಲ್ಲಿ ಹೊಸ ತಂತ್ರಜ್ಞಾನ ಬಳಸಲಾಗಿದೆ. TVS 10 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದ ನಂತರ ಈ ಬೈಕ್ ಅನ್ನು ಹೊರ ತಂದಿದೆ.
Raider 125 ರಲ್ಲಿ iGO ತಂತ್ರಜ್ಞಾನವನ್ನು ಬಳಸಲಾಗಿದೆ. iGO ಅಸಿಸ್ಟ್ ಬೂಸ್ಟ್ ಮೋಡ್‌ನೊಂದಿಗೆ ಕೇವಲ 5.8 ಸೆಕೆಂಡ್‌ಗಳಲ್ಲಿ 0 ರಿಂದ 60 kmph ವೇಗ ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ ಇಂಧನ ದಕ್ಷತೆಯನ್ನು 10 ಪ್ರತಿಶತದಷ್ಟು ಸುಧಾರಿಸಲಾಗಿದೆ.
ಟಿವಿಎಸ್ ಮೋಟಾರ್ಸ್ (TVS Motors) ಕಂಪ್ಯೂಟರ್ ಬಿಸಿನೆಸ್ ಹೆಡ್ ಅನಿರುದ್ಧ್ ಹಲ್ದಾರ್ (Anirudh Haldar) ಮಾತನಾಡಿ, ಟಿವಿಎಸ್ ರೈಡರ್ (TVS Raide) ಉತ್ತಮವಾಗಿದೆ. ಬೂಸ್ಟ್ ಮೋಡ್ ಹೆಚ್ಚುವರಿ 0.55 Nm ಟಾರ್ಕ್ ಉತ್ಪಾದಿಸುತ್ತದೆ. 10ರಷ್ಟು ಇಂಧನ ಕ್ಷಮತೆಯಲ್ಲಿ ಸುಧಾರಣೆ.
ಹೊಸ ತಲೆಮಾರಿನ ಸವಾರರು ವೇಗ ಮತ್ತು ಮೈಲೇಜ್‌ಗೆ ಹೆಚ್ಚು ಬೆಲೆ ನೀಡುತ್ತಾರೆ. ಹೊಸ ಟಿವಿಎಸ್ ರೈಡರ್ ಎರಡರಲ್ಲೂ ಉತ್ತಮವಾಗಿದೆ. ನಾವು ಯಾವಾಗಲೂ ನಮ್ಮ ಸವಾರರನ್ನು ಮೆಚ್ಚಿಸುವತ್ತ ಗಮನ ಹರಿಸುತ್ತೇವೆ ಎಂದು ಹೇಳಿದರು.
TVS ರೈಡರ್ 125 ನ ಹೊಸ ರೂಪಾಂತರವು 124.8 cc ಏರ್ ಮತ್ತು ಆಯಿಲ್ ಕೂಲ್ಡ್ 3V ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಬೈಕುಗೆ 8.37 kW ಪವರ್ ನೀಡುತ್ತದೆ. ಇದು 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ ಮತ್ತು 17-ಇಂಚಿನ ಟೈರ್‌ಗಳೊಂದಿಗೆ ಬರುತ್ತದೆ.
ಕಂಪನಿಯು ಟಿವಿಎಸ್ ರೈಡರ್ 125 ರ ಹೊಸ ರೂಪಾಂತರವನ್ನು ರೂ 98,389 ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾದ ಬಜಾಜ್ ಪಲ್ಸರ್ N125, Hero Xtreme 125, Honda Shine 125, SP125 ನಂತಹ ಬೈಕ್‌ಗಳೊಂದಿಗೆ ಇದು ನೇರವಾಗಿ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.