
Beijing (China): ಚೀನಾದಲ್ಲಿ ಈ ವರ್ಷದ 13ನೇ ಚಂಡಮಾರುತ ‘ಕಾಜಿಕಿ’ ಭಾರೀ (yphoon Kajiki in China) ತೊಂದರೆ ಉಂಟುಮಾಡಿದೆ. ಭಾನುವಾರ ರಾತ್ರಿ ಇದು ದಕ್ಷಿಣ ಚೀನಾದ ಹೈನಾನ್ ದ್ವೀಪ ಪ್ರಾಂತ್ಯವನ್ನು ತಟ್ಟಿತು. ಈ ಚಂಡಮಾರುತದಿಂದ 1 ಲಕ್ಷಕ್ಕೂ ಹೆಚ್ಚು ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತವು ಸನ್ಯಾ ನಗರದಿಂದ ಲೆಡಾಂಗ್ ಪ್ರದೇಶದವರೆಗೆ ಹಾದು, ವಿಯೆಟ್ನಾಂ ಕರಾವಳಿ ಭಾಗಗಳತ್ತ ಸಾಗುತ್ತಿದೆ. ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಇದರ ಪರಿಣಾಮವಾಗಿ ರಸ್ತೆಗಳು, ನೀರು-ವಿದ್ಯುತ್, ಸಂವಹನ ವ್ಯವಸ್ಥೆಗಳಿಗೆ ಹಾನಿ ಉಂಟಾಗಿದೆ. ಹಲವು ಮರಗಳು ಉರುಳಿವೆ, ಪ್ರವಾಹ ಉಂಟಾಗಿದೆ.
ಅಪಾಯ ಎದುರಿಸಲು 10,000 ಕ್ಕೂ ಹೆಚ್ಚು ಸೈನ್ಯ, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಇಳಿದಿದ್ದಾರೆ. ಪ್ರವಾಹ ನಿಯಂತ್ರಣ, ಪರಿಹಾರ ಮತ್ತು ರಸ್ತೆ ದುರಸ್ತಿ ಕಾರ್ಯಗಳು ನಡೆಯುತ್ತಿವೆ.
ಸಾರ್ವಜನಿಕ ಸಾರಿಗೆ ನಿಧಾನವಾಗಿ ಪುನರಾರಂಭವಾಗುತ್ತಿದೆ. ಸನ್ಯಾ ವಿಮಾನ ನಿಲ್ದಾಣ ಈಗ ಕಾರ್ಯನಿರ್ವಹಿಸುತ್ತಿದೆ, ಆದರೆ ಹೈಕೌ ಬಂದರುಗಳು ಇನ್ನೂ ಮುಚ್ಚಲ್ಪಟ್ಟಿವೆ.
ಇದರ ಜೊತೆಗೆ, ಲಾವೋಸ್ ದೇಶಕ್ಕೂ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತವು ಅಲ್ಲಿ ಭಾರೀ ಮಳೆ, ಗಾಳಿ, ಗುಡುಗು ತರಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆಗಸ್ಟ್ 25ರಿಂದ 31ರವರೆಗೆ ಲಾವೋಸ್‌ನ ಹಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.