Bengaluru: ರೈಡ್ (Uber) ಹೈಲಿಂಗ್ ಕ್ಷೇತ್ರದಲ್ಲಿ ಸ್ಪರ್ಧೆ ತೀವ್ರವಾಗುತ್ತಿರುವ ಬೆನ್ನಲ್ಲೇ, ಊಬರ್ ತನ್ನ ಆಟೊ ಸೇವೆಗೆ ಹೊಸ ಸಬ್ಸ್ಕ್ರಿಪ್ಷನ್ ಮಾಡಲ್ ಪರಿಚಯಿಸಿದೆ. ನಮ್ಮ ಯಾತ್ರಿ ಮತ್ತು ರ್ಯಾಪಿಡೋ ಮಾದರಿಯಂತೆ, ಕಮಿಷನ್ ಪಡೆಯುವ ಬದಲು, ಚಾಲಕರಿಗೆ ಪ್ಲಾಟ್ಫಾರ್ಮ್ ಶುಲ್ಕ ವಿಧಿಸುವ ವ್ಯವಸ್ಥೆ ಅಳವಡಿಸಿಕೊಂಡಿದೆ.
Subscription ಮಾಡಲ್ ಎಂದರೇನು?
- ಊಬರ್ ಪ್ರತೀ ರೈಡ್ ಗೆ ಕಮಿಷನ್ ಪಡೆಯುವುದಿಲ್ಲ.
- ಚಾಲಕರು ಊಬರ್ ಪ್ಲಾಟ್ಫಾರ್ಮ್ ಬಳಸಲು ನಿರ್ದಿಷ್ಟ ಶುಲ್ಕ ಪಾವತಿಸಬೇಕು.
- ಗ್ರಾಹಕರು ನೇರವಾಗಿ ಚಾಲಕರಿಗೆ ಹಣ ಪಾವತಿಸಬೇಕು; ಊಬರ್ ಖಾತೆ ಮೂಲಕ ಪಾವತಿ ಸಾಧ್ಯವಿಲ್ಲ.
- ಊಬರ್ ಶಿಫಾರಸು ದರ ನೀಡವ, ಅಂತಿಮ ದರವನ್ನು ಚಾಲಕರು ಮತ್ತು ಪ್ರಯಾಣಿಕರು ನಿರ್ಧರಿಸಬಹುದು.
- ದರ ಸಂಬಂಧಿತ ತಕರಾರುಗಳ ವಿಚಾರದಲ್ಲಿ ಊಬರ್ ಮಧ್ಯಪ್ರವೇಶಿಸುವುದಿಲ್ಲ.
- ಊಬರ್ ಕೇವಲ ಸುರಕ್ಷತೆ ಮತ್ತು ಪ್ಲಾಟ್ಫಾರ್ಮ್ ಸೇವೆ ನೀಡುವ ಜವಾಬ್ದಾರಿಯನ್ನೇ ಹೊರುತ್ತದೆ.
ಈ ಹೊಸ ನೀತಿ ಚಾಲಕರಿಗೆ ಹೆಚ್ಚು ಲಾಭದಾಯಕವಾಗಲಿದೆ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಊಬರ್ ತನ್ನ ಸ್ಥಾನವನ್ನು ಮರಳಿ ಪಡೆಯಲು ಸಹಾಯ ಮಾಡಲಿದೆ.