![Deputy Chief Minister DK Shivakumar Deputy Chief Minister DK Shivakumar](https://kannadatopnews.com/wp-content/uploads/2025/02/Photoshop_Online-news-copy-127.jpg)
Mysuru: “ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಉಪಮುಖ್ಯಮಂತ್ರಿಯಾಗಿ ಹೇಳುತ್ತೇನೆ, ಉದಯಗಿರಿ ಗಲಭೆಯಲ್ಲಿ (Udayagiri riots) ಪೊಲೀಸ್ ವಿಭಾಗದ ತಪ್ಪು ಇಲ್ಲ. ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದಾರೆ ಮತ್ತು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಗಾಯಗೊಂಡರೂ, ಅವರು ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿದ್ದಾರೆ. ನಾನು ಅವರಿಗೆ ಸಪೋರ್ಟ್ ಮಾಡುತ್ತೇನೆ,” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಉದಯಗಿರಿ ಗಲಭೆಗೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ವೇಳೆ, “ಮುಖ್ಯಮಂತ್ರಿಗಳು ಈ ವಿಷಯಕ್ಕೆ ಪ್ರತಿಕ್ರಿಯೆ ನೀಡುತ್ತಾರ, ನಾನು ಸದ್ಯಕ್ಕೆ ಅವರ ಪರವಾಗಿ ಮಾತನಾಡುತ್ತೇನೆ. ನಾನು ಎಲ್ಲಾ ಮಾಹಿತಿ ಪಡೆಯಲು ಪ್ರಯತ್ನಿಸಿದ್ದೇನೆ, ಪೊಲೀಸರ ಕ್ರಮ ಸರಿಯಾಗಿಯೇ ಮುಂದುವರೆದಿದೆ,” ಎಂದರು.
“ಕಲ್ಲು ಎಸೆದವರು 14-15 ವರ್ಷದ ಹುಡುಗರು, ಮತ್ತು ಅವರು ಹಿರಿಯರ ಮಾತುಗಳನ್ನು ಕೇಳಲಿಲ್ಲ. ನಾವು ಗಲಭೆಯನ್ನು ಶಾಂತವಾಗಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಪೊಲೀಸರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ,” ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಮೆಟ್ರೋ ದರ ಏರಿಕೆ ಕುರಿತು, “ಭಾರತಿ ಜೆನತಾ ಪಕ್ಷವು ಎಲ್ಲಾ ವಿಷಯಗಳಲ್ಲಿ ರಾಜಕೀಯ ಮಾಡುತ್ತಿದೆ. ಆದರೆ ಮೆಟ್ರೋ ದರ ಏರಿಕೆ ಕೇಂದ್ರ ಸರ್ಕಾರದ ನಿಯಮಗಳನ್ನು ಅನುಸರಿಸುತ್ತದೆ. ಅದನ್ನು ಆಯ್ಕೆ ಮಾಡಿದ್ದವರು ಅದನ್ನು ನಿರ್ಧಾರ ಮಾಡುತ್ತಾರೆ,” ಎಂದರು.
“ಕೆ.ಎನ್. ರಾಜಣ್ಣ ಅವರು ಹಿರಿಯ ನಾಯಕರು. ಅವರ ಬಗ್ಗೆ ನನಗೆ ಪ್ರತಿಕ್ರಿಯೆ ನೀಡಬೇಕೆಂದು ನನಗೆ ಖಚಿತವಿಲ್ಲ,” ಎಂದು ಡಿಕೆ ಶಿವಕುಮಾರ್ ಹೇಳಿದರು.