Mumbai: ಮಹಾರಾಷ್ಟ್ರದ (Maharashtra) ರಾಜಕೀಯದಲ್ಲಿ ಶನಿವಾರದಂದು ಅಚ್ಚರಿಯ ಸಂಗಮವೊಂದು ನಡೆಯಿತು. ಬಹುಕಾಲದ ನಂತರ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ (Uddhav Thackeray and Raj Thackeray) ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಸುಮಾರು 20 ವರ್ಷಗಳ ಹಿಂದಿನ ಬೇರ್ಪಟ್ಟ ಸಂಬಂಧ ಮರುಜೋಡನೆಯಾಯಿತು. ಬಿಜೆಪಿ ವಿರುದ್ಧ ಒಟ್ಟಾಗಿ ವಾಗ್ದಾಳಿ ನಡೆಸಿದ ಇಬ್ಬರೂ, “ಮರಾಠಿಗರ ಧ್ವನಿ” ಎಂಬ ಹೆಸರಿನ ದೊಡ್ಡ ರ್ಯಾಲಿಯಲ್ಲಿ ಭಾಗವಹಿಸಿದರು.
ಮಹಾರಾಷ್ಟ್ರದ ಸರ್ಕಾರ, ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸಲು ಮುಂದಾಗಿತ್ತು. ಆದರೆ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ಕೊನೆಗೆ ಈ ಕ್ರಮವನ್ನು ಸರ್ಕಾರ ಹಿಂದಕ್ಕೆ ತೆಗೆದುಕೊಂಡಿತು. ಈ ಜವಾಬ್ದಾರಿಯ ವಿಜಯವನ್ನು ಶಿವಸೇನಾ ಮತ್ತು ಎಂಎನ್ಎಸ್ ಒಟ್ಟಾಗಿ ಆಚರಿಸಿದವು. ಇದೇ ಹಿನ್ನೆಲೆಯಲ್ಲಿ ಉದ್ಧವ್ ಮತ್ತು ರಾಜ್ ಸೇರಿ ವಿಜಯೋತ್ಸವ ನಡೆಸಿದರು.
ರಾಜ್ ಠಾಕ್ರೆ ಶಿವಸೇನಾ ಸ್ಥಾಪಕರಾದ ಬಾಳಾ ಸಾಹೇಬ್ ಠಾಕ್ರೆಯ ಅಳಿಯ. 1990ರಲ್ಲಿ ರಾಜಕೀಯವಾಗಿ ಗುರುತಿಸಿಕೊಂಡ ರಾಜ್, ಆದರೆ ಬಾಳಾ ಸಾಹೇಬ್ ಅವರ ಪುತ್ರ ಉದ್ಧವ್ ಠಾಕ್ರೆ ಅವರಿಗೆ ಪಕ್ಷದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಟ್ಟ ಕಾರಣದಿಂದ 2005ರಲ್ಲಿ ಪಕ್ಷ ತೊರೆದು ಎಂಎನ್ಎಸ್ ಸ್ಥಾಪಿಸಿದರು. ಆಗಿನಿಂದ ಇಂದು ವರೆಗೆ ಇಬ್ಬರೂ ಪ್ರತ್ಯೇಕವಾಗಿದ್ದರು.
ಮಹಾರಾಷ್ಟ್ರ ಸರ್ಕಾರವು ನೂತನ ತ್ರಿಭಾಷಾ ನೀತಿಯಂತೆ ಹಿಂದಿಯನ್ನು ಮೂರನೇ ಭಾಷೆಯಾಗಿ ಮಾಡಬೇಕೆಂದು ನಿರ್ಧಾರ ತೆಗೆದುಕೊಂಡಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದರಿಂದ, ವಿಜಯೋತ್ಸವವನ್ನು ಆಯೋಜಿಸಿ ಉಭಯ ನಾಯಕರು ಜತೆಯಾಗಿ ಭಾಗವಹಿಸಿದರು. ಈ ಘಟನೆಯೇ ಅವರ ಒಗ್ಗಟ್ಟಿಗೆ ದಾರಿ ಮುರಿದಂತೆ ತಿಳಿದುಬಂದಿದೆ.
ರಾಜ್ ಠಾಕ್ರೆ ಅವರು ರ್ಯಾಲಿಯಲ್ಲಿ ಮಾತನಾಡಿ, ಹಿಂದಿ ಸಮ್ಮಾನಕ್ಕೆ ಅರ್ಹವಾದ ಭಾಷೆ ಆದರೆ ಅದನ್ನು ಬಲವಂತವಾಗಿ ಕಲಿಯಿಸಲು ಸಾಧ್ಯವಿಲ್ಲ ಎಂದರು. ಮುಂಬೈ ಮಹಾರಾಷ್ಟ್ರದಲ್ಲಿಯೇ ಇರುತ್ತದೆ, ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಹಾರ, ಯು.ಪಿ, ರಾಜಸ್ಥಾನದಲ್ಲಿ ಮೂರನೇ ಭಾಷೆಯ ಬಗ್ಗೆ ಕೇಳಿದಾಗ ಉತ್ತರವೇ ಇಲ್ಲ. ಹಾಗಾದರೆ ಮಹಾರಾಷ್ಟ್ರ ಮಾತ್ರ ಹಿಂದಿಗೆ ಬಲವಂತವಾಗಿ ಮುಡಿಪಾಗಬೇಕೆಂದು ಅವರು ಪ್ರಶ್ನಿಸಿದರು.