back to top
27.4 C
Bengaluru
Tuesday, February 17, 2026
HomeKarnatakaಕರ್ನಾಟಕದಲ್ಲಿ Urea Fertilizer ಕೊರತೆ: CM Siddaramaiah ನವರಿಂದ ಕೇಂದ್ರಕ್ಕೆ ಪತ್ರ

ಕರ್ನಾಟಕದಲ್ಲಿ Urea Fertilizer ಕೊರತೆ: CM Siddaramaiah ನವರಿಂದ ಕೇಂದ್ರಕ್ಕೆ ಪತ್ರ

- Advertisement -
- Advertisement -

Bengaluru: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರದ (Urea fertilizer) ಕೊರತೆಯು ಉಂಟಾಗಿದ್ದು, ಹಲವಾರು ಜಿಲ್ಲೆಗಳ ರೈತರು ಆಕ್ರೋಶಗೊಂಡಿದ್ದಾರೆ. ಕೊಪ್ಪಳ, ಗದಗ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ರೈತರು ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾಗೆ ಪತ್ರ ಬರೆದು, ರಾಜ್ಯಕ್ಕೆ ಕಡ್ಡಾಯವಾಗಿ ಯೂರಿಯಾ ಪೂರೈಸಬೇಕು ಎಂದು ಮನವಿ ಮಾಡಿದ್ದಾರೆ.

ಪತ್ರದ ಮುಖ್ಯಾಂಶಗಳು

  • ಖಾರಿಫ್ ಹಂಗಾಮಿಗೆ ಕೇಂದ್ರವು ಕರ್ನಾಟಕಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾ ಹಂಚಿಕೆ ಮಾಡಿದ್ದು, ಇದರಲ್ಲಿ ಇದುವರೆಗೆ ಕೇವಲ 5,16,959 ಮೆಟ್ರಿಕ್ ಟನ್ ಮಾತ್ರ ಪೂರೈಕೆ ಆಗಿದೆ.
  • ಏಪ್ರಿಲ್‌ರಿಂದ ಜುಲೈವರೆಗೆ ರಾಜ್ಯಕ್ಕೆ 6,80,655 ಮೆಟ್ರಿಕ್ ಟನ್ ಯೂರಿಯಾ ಅಗತ್ಯವಿದೆ.
  • ಕೆಲ ಕಂಪನಿಗಳು ಯೂರಿಯಾ ಪೂರೈಕೆ ಮಾಡಲು ಅಸಾಧ್ಯತೆ ತೋರುತ್ತಿವೆ.
  • ಮಳೆಯು ಆರಂಭವಾಗಿರುವುದರಿಂದ ಬಿತ್ತನೆ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ.
  • ಮೆಕ್ಕೆಜೋಳದ ವಿಸ್ತೀರ್ಣ 2 ಲಕ್ಷ ಹೆಕ್ಟೇರಿನಿಂದ ಹೆಚ್ಚಾಗಿದೆ.
  • 13,000 ಹೆಕ್ಟೇರಿನಲ್ಲಿ ಖಾರಿಫ್ ಮುಂಚಿನ ಬಿತ್ತನೆ ಆಗಿದೆ.

ರಸ್ತೆ ತಡೆ ಮತ್ತು ಪ್ರತಿಭಟನೆ

  • ಕೊಪ್ಪಳದ ಬೇವೂರಿನಲ್ಲಿ ರೈತರು ಯೂರಿಯಾ ಗೊಬ್ಬರ ವಿತರಣೆಗೆ ಆಗ್ರಹಿಸಿ ರಸ್ತೆ ತಡೆ ಮಾಡಿದ್ದಾರೆ.
  • ಗದಗದಲ್ಲಿಯೂ ರೈತರು ಗೋದಾಮು ಮುಂದೆ ಸಾಲಿನಲ್ಲಿ ನಿಂತು ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ.
  • ಕೆಲವರಿಗೆ ಮಾತ್ರ ಟೋಕನ್ ನೀಡಲಾಗುತ್ತಿದ್ದು, ಗೊಬ್ಬರದ ಲಂಚದ ಆರೋಪಗಳೂ ಕೇಳಿಬಂದಿವೆ.
  • ಸರಕಾರ ಸಮರ್ಪಕವಾಗಿ ಗೊಬ್ಬರ ವಿತರಿಸಬೇಕು ಎಂಬುದು ರೈತರ ಒತ್ತಾಯ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page