ಭಾರತ ಶೀಘ್ರದಲ್ಲೇ ಅಮೆರಿಕದ ಕ್ಷಮೆ ಕೇಳಲಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.
- ಸುಂಕ ತಪ್ಪಿಸಿಕೊಳ್ಳಲು 3 ಷರತ್ತು
- ರಷ್ಯಾ, ಚೀನಾ ಜೊತೆಗಿನ ಸಂಬಂಧ ಕಡಿತಗೊಳಿಸಬೇಕು.
- ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು.
- ಬ್ರಿಕ್ಸ್ (BRICS) ಸಂಘಟನೆಯಿಂದ ಹಿಂದೆ ಸರಿಯಬೇಕು.
“ನಮ್ಮದು 30 ಟ್ರಿಲಿಯನ್ ಡಾಲರ್ ಆರ್ಥಿಕತೆ. ನಾವು ವಿಶ್ವದ ಗ್ರಾಹಕರು, ನಮ್ಮ ಮಾತೇ ಅಂತಿಮ” ಎಂದು ಲುಟ್ನಿಕ್ ಹೇಳಿದ್ದಾರೆ. ರಷ್ಯಾ–ಚೀನಾ–ಭಾರತ ಬಾಂಧವ್ಯ ಎಷ್ಟು ದಿನ ಇರುತ್ತದೆ ಎಂಬುದನ್ನು ನೋಡೋಣ ಎಂದು ಅಮೆರಿಕ ವ್ಯಂಗ್ಯವಾಡಿದೆ.
ಚೀನಾದ ಕಾರಣಕ್ಕೆ ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎಸ್‌ಸಿಒ (SCO) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಪುಟಿನ್ ಮತ್ತು ಕ್ಸಿ ಜಿನ್ಪಿಂಗ್ ಒಟ್ಟಿಗೆ ಕಾಣಿಸಿಕೊಂಡ ಚಿತ್ರವನ್ನು ಟ್ರಂಪ್ ಹಂಚಿಕೊಂಡಿದ್ದರು.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿರುವುದೇನೆಂದರೆ – “ಭಾರತ–ಅಮೆರಿಕ ಸಂಬಂಧಗಳು ನಮಗೆ ಬಹಳ ಮುಖ್ಯ. ನಾವು ಜಾಗತಿಕ ಕಾರ್ಯತಂತ್ರದ ಪಾಲುದಾರರು.”