ಅಮೇರಿಕಾ ಮತ್ತು ಭಾರತ ಶೈಕ್ಷಣಿಕ (US-India) ಸಂಬಂಧಗಳಲ್ಲಿ ಹೊಸ ಮೈಲಿಗಲ್ಲು ಸಾಧಿಸಿವೆ. 2023-24ರಲ್ಲಿ, 3,30,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೇರಿಕದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ವಿಶೇಷವಾಗಿ STEMM (Science, Technology, Engineering, Mathematics and Medicine) ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹೊಸ ಫೆಲೋಶಿಪ್ ಆರಂಭಿಸಲಾಗಿದೆ.
“Women in STEMM” ಫೆಲೋಶಿಪ್ ಭಾರತದ ಮಹಿಳಾ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಮಾರ್ಗದರ್ಶಕ ಕಾರ್ಯಕ್ರಮವಾಗಿ ಪ್ರಾರಂಭವಾಗಿದೆ. ಇದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಅಮೇರಿಕಾ-ಭಾರತ ಒಕ್ಕೂಟದ ಸಹಭಾಗಿತ್ವದಿಂದ ರೂಪಿತವಾಗಿದೆ. STEMM (Science, Technology, Engineering, Mathematics and Medicine) ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಮಹಿಳೆಯರಿಗೆ ತರಬೇತಿ ಮತ್ತು ಬೆಂಬಲ ನೀಡುವುದಕ್ಕೆ ಈ ಯೋಜನೆ ಅನುಕೂಲಕರವಾಗಿದೆ.
2023/24ರಲ್ಲಿ, ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 23% ಹೆಚ್ಚಾಗಿದೆ. ಪದವೀಧರ ವಿದ್ಯಾರ್ಥಿಗಳ ಸಂಖ್ಯೆ 19% ಏರಿಕೆಯಾಗಿ 1,97,000 ತಲುಪಿದೆ. ಐಚ್ಛಿಕ ಪ್ರಾಯೋಗಿಕ ತರಬೇತಿ (OPT) ನಲ್ಲಿ ಭಾಗವಹಿಸುವವರ ಸಂಖ್ಯೆ 41% ಹೆಚ್ಚಾಗಿದೆ. ಪದವಿಪೂರ್ವ ವಿದ್ಯಾರ್ಥಿಗಳ ಸಂಖ್ಯೆಯೂ 13% ಹೆಚ್ಚಳವಾಗಿದೆ.
2023ರ ಓಪನ್ ಡೋರ್ಸ್ ವರದಿ ಪ್ರಕಾರ, ಭಾರತದಿಂದ ಹೆಚ್ಚು ವಿದ್ಯಾರ್ಥಿಗಳು ಅಮೇರಿಕಾದ ಕಡೆ ಸೆಳೆಯುತ್ತಿದ್ದಾರೆ. ಅಮೇರಿಕಾದ ವಿದ್ಯಾರ್ಥಿಗಳು ಭಾರತದಲ್ಲಿ ಅಧ್ಯಯನ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಮೆರಿಕನ್ ಶಿಕ್ಷಣದ ಮಾಹಿತಿಯನ್ನು ಸುಲಭಗೊಳಿಸಲು EducationUSA ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಪ್ರಾರಂಭವಾಗಿದೆ.
ಅಮೆರಿಕಾ-ಭಾರತ ಶೈಕ್ಷಣಿಕ ಸಹಕಾರವು ಕೇವಲ ವಿದ್ಯಾರ್ಥಿಗಳ ವಿನಿಮಯಕ್ಕಲ್ಲದೆ, ಲಿಂಗ ಸಮಾನತೆ, ಮಹಿಳಾ ಸಬಲೀಕರಣ, ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಹೊಸ ಹೆಜ್ಜೆ ಇಡುತ್ತಿದೆ.