Home Business America ದ ಬಡ್ಡಿದರ ಸ್ಥಿತಿ ಮತ್ತು ಭವಿಷ್ಯದ ನಿರೀಕ್ಷೆಗಳು

America ದ ಬಡ್ಡಿದರ ಸ್ಥಿತಿ ಮತ್ತು ಭವಿಷ್ಯದ ನಿರೀಕ್ಷೆಗಳು

America


ಅಮೆರಿಕದ (Americ ) ಫೆಡರಲ್ ರಿಸರ್ವ್ (US Federal Reserve) ತನ್ನ ಬಡ್ಡಿದರವನ್ನು ಶೇ. 4.25 ರಿಂದ 4.50ರ ಶ್ರೇಣಿಯಲ್ಲಿಯೇ ಮುಂದುವರಿಸಲು ನಿರ್ಧರಿಸಿದೆ. ಹೊಸ ಸರ್ಕಾರದ ವಿವಾದಾತ್ಮಕ ಆಮದು ಸುಂಕ ನೀತಿಯು ಈ ನಿರ್ಧಾರಕ್ಕೆ ಮಹತ್ವದ್ದಾಗಿದೆ. ಮಾರುಕಟ್ಟೆಯೂ ಇದೇ ನಿರ್ಧಾರವನ್ನು ನಿರೀಕ್ಷಿಸಿತ್ತು. ಫೆಡರಲ್ ರಿಸರ್ವ್ ಸಭೆಯ ನಂತರ ಅಧ್ಯಕ್ಷ ಜಿರೋಮ್ ಪೋವೆಲ್ ಈ ವಿಷಯವನ್ನು ಸ್ಪಷ್ಟಪಡಿಸಿದರು.

ಅಮೆರಿಕದಲ್ಲಿ ಹಣದುಬ್ಬರ ಶೇ. 2ರ ಮಟ್ಟದಲ್ಲಿರಬೇಕು ಎಂಬ ಗುರಿಯಿದೆ. ಆದರೆ ಪ್ರಸ್ತುತ ಅದು ಹೆಚ್ಚಾಗಿ ಇರುವುದರಿಂದ ಬಡ್ಡಿದರ ಕಡಿತ ಮಾಡಲಾಗಿಲ್ಲ. ಆಮದು ಸುಂಕ ನೀತಿಯು ಹಣದುಬ್ಬರವನ್ನು ಹೆಚ್ಚಿಸುವ ಸಾಧ್ಯತೆ ಇರುವುದರಿಂದ, ಬಡ್ಡಿದರ ಸ್ಥಿತಿಯನ್ನು ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಯಿತು.

ಫೆಡರಲ್ ರಿಸರ್ವ್ ಈ ವರ್ಷ 50 ಮೂಲಾಂಕಗಳಷ್ಟು ಬಡ್ಡಿದರ ಕಡಿತಗೊಳಿಸುವ ಇಂಗಿತ ನೀಡಿದೆ. 2025ರ ಡಿಸೆಂಬರ್ ನೊಳಗೆ ಎರಡು ಬಾರಿ ಬಡ್ಡಿದರ ಕಡಿತಗೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಶೇ. 4.25-4.50ರ ಶ್ರೇಣಿಯಲ್ಲಿರುವ ಬಡ್ಡಿದರ, 2025ರ ಡಿಸೆಂಬರ್ ನಲ್ಲಿ ಶೇ. 3.75-4.0ರಷ್ಟಾಗಬಹುದು.

ಕೋವಿಡ್ ನಂತರ ಅಮೆರಿಕದಲ್ಲಿ ಹಣದುಬ್ಬರ ಶೇ. 7ಕ್ಕಿಂತ ಹೆಚ್ಚಾಗಿತ್ತು. ಇದನ್ನು ನಿಯಂತ್ರಿಸಲು ಫೆಡರಲ್ ರಿಸರ್ವ್ ಸತತವಾಗಿ ಬಡ್ಡಿದರ ಹೆಚ್ಚಿಸಿತು. ಶೇ. 5.25-5.50ರ ಮಟ್ಟಕ್ಕೇರಿಸಿದ ಬಳಿಕ, 2024ರ ಸೆಪ್ಟೆಂಬರ್‌ನಲ್ಲಿ ಮೊದಲ ಬಡ್ಡಿದರ ಕಡಿತ ಮಾಡಲಾಯಿತು. ಸೆಪ್ಟೆಂಬರ್‌ನಲ್ಲಿ 50, ನವೆಂಬರ್ ನಲ್ಲಿ 25, ಮತ್ತು ಡಿಸೆಂಬರ್ನಲ್ಲಿ 25 ಮೂಲಾಂಕಗಳಷ್ಟು ಕಡಿತಗೊಳಿಸಲಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version