back to top
22.4 C
Bengaluru
Tuesday, October 7, 2025
HomeEnvironmentVaishno Devi ಭೂಕುಸಿತ: 35 ಜನರ ಸಾವು

Vaishno Devi ಭೂಕುಸಿತ: 35 ಜನರ ಸಾವು

- Advertisement -
- Advertisement -

ಜಮ್ಮುವಿನ ಕತ್ರಾ ಜಿಲ್ಲೆಯ ವೈಷ್ಣೋದೇವಿ (Vaishno Devi) ಯಾತ್ರಾಮಾರ್ಗದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

  • ಅರ್ಧಕುವರಿ ಸಮೀಪ ಮಣ್ಣಿನಡಿ ಸಿಲುಕಿದ್ದ 35 ಮೃತದೇಹಗಳನ್ನು ಹೊರತೆಗೆಯಲಾಗಿದೆ.
  • 22 ಜನರ ಗುರುತು ಪತ್ತೆಯಾಗಿದೆ.
  • ಅವರು ಹೆಚ್ಚಿನವರು ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಮಧ್ಯ ಪ್ರದೇಶದವರಾಗಿದ್ದಾರೆ.

ಯಾತ್ರೆ ತಾತ್ಕಾಲಿಕ ಸ್ಥಗಿತ

  • ಅಪಘಾತದ ಬಳಿಕ ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
  • ಸೇನೆ, ಪೊಲೀಸರು, SDRF ಮಾನವಶ್ರಮದಿಂದಲೇ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ.
  • 20 ಜನರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದೆ.

ಜಮ್ಮುವಿನಲ್ಲಿ ದಾಖಲೆ ಮಳೆ

  • 24 ಗಂಟೆಯಲ್ಲಿ 296 ಮಿ.ಮೀ ಮಳೆಯಾಗಿ, 52 ವರ್ಷದ ಹಳೆಯ ದಾಖಲೆಯನ್ನು ಮುರಿದಿದೆ.
  • 1973ರಲ್ಲಿ 272.6 ಮಿ.ಮೀ ಮಳೆಯಾಗಿತ್ತು.
  • ತಾವಿ ನದಿ ಉಕ್ಕಿ ಹರಿಯುತ್ತಿದ್ದು, ನೂರಾರು ಮನೆ, ಕೃಷಿಭೂಮಿ, ಪಶುಸಂಪತ್ತು ಹಾನಿಯಾಗಿದೆ.
  • ಒಂದೇ ದಿನ 6,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಪೀರ್ಖೋ ಪ್ರದೇಶದಲ್ಲಿ ಹೆಚ್ಚು ಹಾನಿ

  • ವಾಹನಗಳು ಹೂತು ಹೋಗಿವೆ.
  • ಬಂಡೆಗಳು, ಮರಗಳು ಧರೆಗುರುಳಿವೆ.
  • 300ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಜಮ್ಮು-ಶ್ರೀನಗರ ಹೆದ್ದಾರಿ ಬಂದ್

  • ಉಧಮ್ಪುರ-ರಾಂಬನ್ ಭಾಗದಲ್ಲಿ ಭಾರೀ ಮಳೆಯಿಂದ ಹೆದ್ದಾರಿಯಲ್ಲಿ ಅನೇಕ ಭೂಕುಸಿತ.
  • ಮೂರು ದಿನಗಳಿಂದ ವಾಹನ ಸಂಚಾರ ಸಂಪೂರ್ಣ ಬಂದ್.
  • 500-600 ವಾಹನಗಳು ಸಿಲುಕಿಕೊಂಡಿವೆ.
  • ಜಖೇನಿ, ಚೆನಾನಿ, ಪತ್ನಿಟಾಪ್, ಬನಿಹಾಲ್ ಭಾಗಗಳಲ್ಲಿ ಹೆಚ್ಚು ಹಾನಿ ಸಂಭವಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page