Bengaluru, Karnataka : ಕಳೆದ ಸೆಪ್ಟೆಂಬರ್ 29 ರಂದು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿಯು (Karnataka Examination Authority) VAO ಹಾಗೂ GTTC ಹುದ್ದೆಗಳಿಗೆ ಅರ್ಜಿ ಹಾಕಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆ ನಡೆಸಿತ್ತು. ಸದರಿ ಹುದ್ದೆಗಳಿಗೆ ಪರೀಕ್ಷೆ ಬರೆದವರ ರಿಸಲ್ಟ್ ಅನ್ನು (ಪ್ರಾವಿಷನಲ್) ಇದೀಗ ಬಿಡುಗಡೆ ಮಾಡಲಾಗಿದೆ. ಚೆಕ್ ಮಾಡಲು ವಿಧಾನ ಹಾಗೂ ಲಿಂಕ್ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಮುಂದಿನ ನೇಮಕ ಪ್ರಕ್ರಿಯೆಗಳಿಗೆ ಈ ಪರೀಕ್ಷೆ ಪಾಸಾಗಲೇ ಬೇಕು.
KEA ಪ್ರಸ್ತುತ ನಡೆಸಿರುವ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ನೇಮಕಾತಿಗೆ ಶಾರ್ಟ್ ಲಿಸ್ಟ್ ಮಾಡಲು ಪರಿಗಣಿಸಲಾಗುವುದಿಲ್ಲ. ಬದಲಾಗಿ ಆ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದವರು ಮುಂದಿನ ಎಲ್ಲ ನೇಮಕ ಪ್ರಕ್ರಿಯೆಯ ಹಂತಗಳಿಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯನ್ನು ಒಟ್ಟು 150 ಅಂಕಗಳಿಗೆ ನಡೆಸಲಾಗಿತ್ತು.
ತಾತ್ಕಾಲಿಕ ಕಡ್ಡಾಯ ಕನ್ನಡ ಪರೀಕ್ಷೆ ರಿಸಲ್ಟ್ ಚೆಕ್ ಮಾಡುವ ವಿಧಾನ
- ಕೆಇಎ ವೆಬ್ಸೈಟ್ https://cetonline.karnataka.gov.in/ ಗೆ ಭೇಟಿ ನೀಡಿ.
- ತೆರೆದ ವೆಬ್ಪೇಜ್ನಲ್ಲಿ ‘ಇತ್ತೀಚಿನ ಪ್ರಕಟಣೆಗಳು’ ಎಂದಿರುವಲ್ಲಿ ಗಮನಿಸಿ.
- ‘ತಾತ್ಕಾಲಿಕ ಕಡ್ಡಾಯ ಕನ್ನಡ ಪರೀಕ್ಷೆ ಫಲಿತಾಂಶ 2024 (VAO/GTTC)’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
- ಹೊಸ ವೆಬ್ಪೇಜ್ ತೆರೆಯುತ್ತದೆ.
- ಇಲ್ಲಿ ರಿಜಿಸ್ಟರ್ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ.
- ‘Submit’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಫಲಿತಾಂಶ ಪ್ರದರ್ಶಿತವಾಗುತ್ತದೆ.