Vijayapura, Bengaluru Rural : ವಿಜಯಪುರ ಪಟ್ಟಣದ 16 ನೇ ವಾರ್ಡಿಗೆ ಅಶುದ್ಧ ನೀರು ಪೂರೈಸುತ್ತಿದ್ದಾರೆ (Impure Water Supply) , ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ನೀರಿನಲ್ಲಿ ಲಾರ್ವಾಗಳು ಹೆಚ್ಚಾಗಿವೆ ಎಂದು ಆರೋಪಿಸಿ ಸಾರ್ವಜನಿಕರು ಖಾಲಿ ಬಿಂದಿಗೆಗಳನ್ನು ಹಿಡಿದು ಪುರಸಭೆಯ (Town Municipal Council) ವಿರುದ್ಧ ಪ್ರತಿಭಟನೆ (Protest) ನಡೆಸಿ ಪುರಸಭೆಯ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡ ಭಾನುಚಂದ್ರ ಮಾತನಾಡಿ “ನಮ್ಮ ವಾರ್ಡಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಕೊಡದೆ ಟ್ಯಾಂಕರುಗಳಲ್ಲಿ ಕೊಡುತ್ತಿದ್ದಾರೆ. ಅನೇಕ ಬಾರಿ ಟ್ಯಾಂಕರುಗಳಲ್ಲಿ ಕುಡಿಯಲು ಯೋಗ್ಯವಲ್ಲದ ಮಣ್ಣು ಮಿಶ್ರಿತ ನೀರು ಬರುತ್ತಿವೆ. ಈ ಕುರಿತು ಪುರಸಭೆಯ ಸದಸ್ಯರಿಗೆ, ಅಧಿಕಾರಿಗಳಿಗೆ, ಮೇಸ್ತ್ರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನೆಗೊಂಡಿಲ್ಲ” ಎಂದು ಹೇಳಿದರು.
ಮಾತನಾಡಿ, ‘ಟ್ಯಾಂಕರುಗಳಲ್ಲಿ ಸರಬರಾಜು ಮಾಡುತ್ತಿರುವ ನೀರಿನಲ್ಲಿ ಲಾರ್ವಾಗಳು ಬಂದಿವೆ ಎಂದು ದೂರುಗಳು ಬಂದಿದ್ದು ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚನೆ ನೀಡಿದ್ದೇನೆ. ಪೈಪ್ ಲೈನ್ ಅಳವಡಿಸಲಿಕ್ಕೆ ಏನು ಸಮಸ್ಯೆ ಇದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದೇನೆ. ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಪುರಸಭಾ ಮುಖ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದರು.