back to top
19.9 C
Bengaluru
Sunday, July 20, 2025
HomeNewsWaqf Board ಗೆ ರೈತರ ಜೇಮೀನು, MP Tejasvi Surya ವಾಗ್ದಾಳಿ

Waqf Board ಗೆ ರೈತರ ಜೇಮೀನು, MP Tejasvi Surya ವಾಗ್ದಾಳಿ

- Advertisement -
- Advertisement -

Bengaluru: ಸಚಿವ ಜಮೀರ್ ಅಹಮದ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ? ಎಂದು ಸಂಸದ ತೇಜಸ್ವಿ ಸೂರ್ಯ (MP Tejasvi Surya) ವಾಗ್ದಾಳಿ ಮಾಡಿದರು.

“ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ (Zameer Ahmed) ಖಾನ್ ಹೇಳಿದರು ಅಂತ ವಿಜಯಪುರ (Vijayapura) ಜಿಲ್ಲೆಯ ಅಧಿಕಾರಿಗಳು ರೈತರ ಜಮೀನನ್ನು ವಕ್ಫ್ ಬೋರ್ಡ್​​ಗೆ (Waqf Board) ಸೇರಿಸಲು ಹೊರಟಿದ್ದಾರೆ.

ಆದರೆ ಒಂದೇ ಒಂದು ದಾಖಲೆಗಳಲ್ಲಿ ಜಮೀನು ಯಾವ ರೀತಿ ವಕ್ಫ್ ಬೋರ್ಡ್​ಗೆ ಸೇರುತ್ತದೆ ಎಂಬುವುದಕ್ಕೆ ಮಾಹಿತಿ ಇಲ್ಲ” ಎಂದು ಅವರು ದೂರಿದರು.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ನೋಂದಣಿ ಕುರಿತಾಗಿ ಎದ್ದಿರುವ ಗೊಂದಲಗಳ ಕುರಿತಾಗಿ ಅಲ್ಲಿನ ರೈತರು ಮತ್ತು ನೋಟಿಸ್ ಪಡೆದಿರುವ ಸಾರ್ವಜನಿಕರು ಇಂದು (ಅ.25) ನಿಯೋಗದೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು.

ಬಳಿಕ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಹಳಷ್ಟು ಜನರಿಗೆ ಕೇಂದ್ರ ಸರ್ಕಾರ ಯಾಕೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದೆ ಅಂತ ಗೊತ್ತಿಲ್ಲ.

ಸಚಿವ ಜಮೀರ್ ಅಹಮದ್ ಕೆಲವು ದಿನಗಳ ಹಿಂದೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ, ವಕ್ಫ್ ಬೋರ್ಡ್ ಯಾವ ಆಸ್ತಿಗಳು ತನ್ನದು ಅಂತ ಹೇಳುತ್ತದೆ ಅದನ್ನು 15 ದಿನಗಳಲ್ಲಿ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಬಂದಿದ್ದಾರೆ.

ಸಚಿವರು ಹೇಳಿದರು ಅಂತ ಜಿಲ್ಲಾಧಿಕಾರಿಗಳಯ ರಾತ್ರೋ ರಾತ್ರಿ ಪಹಣಿಯಲ್ಲಿ ಹೆಸರು ಬದಲಿಸಲು ಹೊರಟಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆಯನ್ನು ವಕ್ಫ್ ಬೋರ್ಡ್ ತನ್ನದು ಅಂತ ಹೇಳುತ್ತಿದೆ ಎಂದು ತಿಳಿಸಿದರು.

ವಕ್ಫ್ ಕಾನೂನು ಬರುವ ಮುನ್ನ ಎಷ್ಟು ಸಾಧ್ಯವಾಗುತ್ತೋ ಅಷ್ಟು ಜಮೀನು ಕಬಳಿಸಿಕೊಳ್ಳಬೇಕು ಅಂತ ಹುನ್ನಾರ ಮಾಡುತ್ತಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲಿ ವಕ್ಫ್ ಸಮಸ್ಯೆ ಇದ್ದರೂ ನನ್ನ ಕಚೇರಿಗೆ ಬನ್ನಿ. ಹೈಕೋರ್ಟ್​ಗೆ ಹೋಗಿ ನಿಮಗೆ ನ್ಯಾಯ ಕೊಡಿಸುತ್ತೇನೆ.

ಇದು ಭಾರತ, ಇದು ಪಾಕಿಸ್ತಾನದ ಕಾನೂನಿನಂತೆ ನಡೆಯುವ ರಾಜ್ಯ ಅಲ್ಲ. ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಮುಸಲ್ಮಾನರಿಗೆ ಕೂಡ ಮೋಸ ಮಾಡಿದೆ.

ವಕ್ಫ್ ಎಂದರೆ ಅಲ್ಲಾ ಅವರಿಗೆ ಕೊಟ್ಟ ಆಸ್ತಿ. ವಕ್ಫ್ ಬೋರ್ಡ್​ ಜಮೀನು ಅತಿಕ್ರಮಣ ಮಾಡಿಕೊಂಡಿದ್ದರೇ, ತನಿಖೆ ಮಾಡಿ ನೋಟೀಸ್ ಕೊಡಬಹುದು.

ಕಾಂಗ್ರೆಸ್ ಮುಸ್ಲಿಂ ವೋಟ್ ಬ್ಯಾಂಕ್​ಗೋಸ್ಕರ ವಕ್ಫ್ ಟ್ರಿಬ್ಯೂನಲ್ ತಂದಿತು. ಕಾನೂನು ಮೂಲಕ ಭೂಮಿ ಅತಿಕ್ರಮಣ ಮಾಡಲು ಕಾಂಗ್ರೆಸ್ ವಕ್ಫ್ ಬೋರ್ಡ್​ಗೆ ಅವಕಾಶ ಮಾಡಿಕೊಟ್ಟಿದೆ.

ಇದನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ.

ಈ ವರ್ಷದ ಡಿಸೆಂಬರ್ನಲ್ಲಿ ನಡೆಯುವ ಅಧಿವೇಶನದಲ್ಲಿ ವಕ್ಫ್ ಕಾನೂನು ಅಂಗೀಕಾರ ಮೂಲಕ ಈ ಎಲ್ಲ ಆಟಾಟೋಪಕ್ಕೆ ಮೋದಿ ಸರ್ಕಾರ ಬ್ರೇಕ್ ಹಾಕಲಿದೆ ಎಂದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page