Vijipura, Devanahalli, Bengaluru Rural : ವಿಜಯಪುರ ಸರ್ಕಾರಿ ಬಾಲಕಿಯರ ಮಾದರಿ ಹಿರಿಯ ಪಾಠಶಾಲೆಯಲ್ಲಿ ಸೋಮವಾರ ಅಗಸ್ತ್ಯ ಫೌಂಡೇಷನ್‌ಯಿಂದ (Agastya Foundation) 6 ನೇ ತರಗತಿಯ ಮಕ್ಕಳಿಗೆ 200ಕ್ಕೂ ಹೆಚ್ಚು ಪ್ರಯೋಗಾತ್ಮಕ ಉಪಕರಣಗಳ ಕಿಟ್ ಗಳನ್ನು ವಿತರಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ಮನೋಹರ್ ಮಾತನಾಡಿ “ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ, ಇಚ್ಛಾಶಕ್ತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಂಗ್ಲಿಷ್ ಮೂಲದ ತಂತ್ರಜ್ಞಾನ ಕನ್ನಡದವರಿಗೆ ಕಬ್ಬಿಣದ ಕಡಲೆ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತಿದ್ದು ಕನ್ನಡದಲ್ಲೂ ಇದನ್ನು ಸುಲಭವಾಗಿ ಕಲಿಯಲು ಅಂತರ್ಜಾಲ ನೆರವಾಗಿದೆ. ಪ್ರಸ್ತುತ ಮನುಷ್ಯನ ಪ್ರತಿಯೊಂದು ಬೆಳವಣಿಗೆಗೂ ವಿಜ್ಞಾನ ಸಹಾಯಕವಾಗಿದ್ದು ವಿಜ್ಞಾನವಿಲ್ಲದೆ ಯಾರಿಗೂ ಭವಿಷ್ಯವಿಲ್ಲ ಆದ್ದರಿಂದ ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯ ಕಡೆಗೆ ಹೆಚ್ಚು ಗಮನಹರಿಸಬೇಕು” ಎಂದು ಹೇಳಿದರು.
ಅಗಸ್ತ್ಯ ಫೌಂಡೇಷನ್‌ನ ತಾಲ್ಲೂಕು ಸಂಯೋಜಕ ಸತೀಶ್ ನಾಯಕ್, ಶಿಕ್ಷಕರಾದ ಸೀಮಾ, ವಿಜಯಕುಮಾರಿ, ಸರಸ್ವತಿ, ಶೋಭಾ ಭಾಗಿಯಾಗಿದ್ದರು