Home News Virat Kohli ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಣೆ: ಭಾವನಾತ್ಮಕ ಸಂದೇಶ ಹಂಚಿಕೊಂಡ ಸ್ಟಾರ್ ಆಟಗಾರ

Virat Kohli ಟೆಸ್ಟ್ ಕ್ರಿಕೆಟ್ ನಿವೃತ್ತಿ ಘೋಷಣೆ: ಭಾವನಾತ್ಮಕ ಸಂದೇಶ ಹಂಚಿಕೊಂಡ ಸ್ಟಾರ್ ಆಟಗಾರ

150
Virat Kohli

ಟೆಸ್ಟ್ ಕ್ರಿಕೆಟ್ ಅಭಿಮಾನರಿಗೆ ಶಾಕ್ ನೀಡುವ ರೀತಿಯಲ್ಲಿ, ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ಈ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ. ಕೆಲದಿನಗಳ ಹಿಂದೆ ನಾಯಕ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡಿದ್ದರೆ, ಈಗ ಕೊಹ್ಲಿಯೂ ದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ.

ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಅವರು ಬಿಸಿಸಿಐಗೆ ಈ ನಿರ್ಧಾರವನ್ನು ಇತ್ತೀಚೆಗೆ ತಿಳಿಸಿದ್ದಾಗಿ ತಿಳಿಸಿದ್ದಾರೆ.

“ನಾನು 14 ವರ್ಷಗಳ ಹಿಂದೆ ಮೊದಲ ಬಾರಿಗೆ ಟೆಸ್ಟ್ ಜೆರ್ಸಿ ಧರಿಸಿದ್ದೆ. ಅದು ನನ್ನ ಜೀವನದ ದಿಕ್ಕೇ ಬದಲಾಯಿಸಿತು. ಈ ಸ್ವರೂಪವು ನನಗೆ ಬಹುಮಾನಗಳಂತೆ ಪಾಠಗಳನ್ನು ಕಲಿಸಿತು. ಬಿಳಿ ಜೆರ್ಸಿಯಲ್ಲಿ ಆಟವಾಡುವುದು ಯಾವಾಗಲೂ ನನಗೆ ಗೌರವದ ವಿಷಯ.”

“ನಾನು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವುದು ಸುಲಭವಲ್ಲ. ಆದರೆ ಇದು ಸರಿಯಾದ ನಿರ್ಧಾರ ಎನ್ನಿಸುತ್ತಿದೆ. ನಾನು ಈ ಸ್ವರೂಪಕ್ಕೆ ಎಲ್ಲವನ್ನೂ ಕೊಟ್ಟಿದ್ದೇನೆ. ನನ್ನ ಹೃದಯ ತುಂಬಿ, ತೃಪ್ತಿ ಮತ್ತು ಕೃತಜ್ಞತೆಯೊಂದಿಗೆ ನಾನು ವಿದಾಯ ಹೇಳುತ್ತಿದ್ದೇನೆ. ನನ್ನ ಟೆಸ್ಟ್ ವೃತ್ತಿಜೀವನವನ್ನು ನೆನಪಿಸಿದಾಗ ಯಾವಾಗಲೂ ಮುಖದಲ್ಲಿ ನಗು ಇರುತ್ತದೆ.” ( https://www.instagram.com/p/DJiwQm0RbiM/?utm_source=ig_embed&ig_rid=7b978615-e140-47d4-b0ea-c75e00168e6a)

ಇಂತಹ ಭಾವುಕ ಸೂಚನೆಯ ಮೂಲಕ, ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ ಪಯಣ ಅಂತ್ಯವಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page