Home News ಸ್ಟೇಡಿಯಂಗಳಲ್ಲಿ Vodafone Idea 5ಜಿ ಸೇವೆ ವಿಸ್ತರಣೆ

ಸ್ಟೇಡಿಯಂಗಳಲ್ಲಿ Vodafone Idea 5ಜಿ ಸೇವೆ ವಿಸ್ತರಣೆ

5G services at 11 stadiums

Bengaluru: ಜಿಯೋ ಮತ್ತು ಏರ್ಟೆಲ್ ನಂತರ, ವೋಡಾಫೋನ್ ಐಡಿಯಾ (Vodafone Idea) ಕೂಡ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5ಜಿ ಸೇವೆ (5G services) ಆರಂಭಿಸಿದೆ. ಕಳೆದ ತಿಂಗಳು ವೋಡಾಫೋನ್ ಐಡಿಯಾ ತನ್ನ ವಾಣಿಜ್ಯ 5ಜಿ ಸೇವೆಗಳನ್ನು ಪರಿಚಯಿಸಿದ್ದಾಗಿದ್ದು, ಈಗ ದೇಶದ 11 ಸ್ಟೇಡಿಯಂಗಳಲ್ಲಿ ಇದನ್ನು ವಿಸ್ತರಿಸಲಾಗಿದೆ.

ಐಪಿಎಲ್ ಪಂದ್ಯಗಳ ಸಂದರ್ಭಗಳಲ್ಲಿ ಪ್ರೇಕ್ಷಕರು ವೇಗದ ಇಂಟರ್ನೆಟ್ ಸೌಲಭ್ಯವನ್ನು ಅನುಭವಿಸಬಹುದಾಗಿದೆ. ಈಗ ಜಿಯೋ, ಏರ್ಟೆಲ್ ಬಳಕೆದಾರರ ಜೊತೆಗೆ ವೋಡಾಫೋನ್ ಐಡಿಯಾ ಬಳಕೆದಾರರು ಕೂಡ 5ಜಿ ಇಂಟರ್ನೆಟ್ ಉಪಯೋಗಿಸಬಹುದಾಗಿದೆ.

  • ಮೊಬೈಲ್ 5ಜಿ ಬೆಂಬಲಿತವಾಗಿರಬೇಕು.
  • ಫೋನ್‌ನ network ಸೆಟ್ಟಿಂಗ್‌ಗಳಲ್ಲಿ 5ಜಿ ಆಯ್ಕೆ ಮಾಡಬೇಕು.

IPL ವೇಳೆ ಭಾರಿ ಜನಜಾತೆ ಇರುತ್ತದೆ. ಈ ಸಮಯದಲ್ಲಿ ಸಾಮಾನ್ಯ network ಇಂಟರ್ನೆಟ್ ಬೇಡಿಕೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಹೊಸ 5ಜಿ ಟವರ್‌ಗಳು, ಬಿಟಿಎಸ್, ಮಿಮೋ ತಂತ್ರಜ್ಞಾನಗಳ ಅಳವಡಿಕೆ ಅಗತ್ಯವಿದೆ.

ವೋಡಾಫೋನ್ ಐಡಿಯಾ ಈಗ 11 ಸ್ಟೇಡಿಯಂಗಳಲ್ಲಿ ಹೆಚ್ಚುವರಿ 5ಜಿ ಸೈಟ್ ಗಳನ್ನು ಸ್ಥಾಪಿಸಿದೆ. ಈಗ 44 ಸೈಟ್ ಗಳ ಜೊತೆಗೆ 53 ಹೊಸ ಸೈಟ್ ಗಳನ್ನು ಸೇರಿಸಲಾಗಿದೆ. ಜೊತೆಗೆ 9 ‘Cell on Wheels’ ಯಂತ್ರಗಳನ್ನು ಬಳಸಿ ಇಂಟರ್ನೆಟ್ ಸಂಪರ್ಕವನ್ನು ಉತ್ತಮಗೊಳಿಸಲಾಗಿದೆ.

ಇದೀಗ ಸ್ಟೇಡಿಯಂಗಳಲ್ಲಿ ಮಾತ್ರ 5ಜಿ ಲಭ್ಯವಿದೆ. ನಗರದ ಉಳಿದ ಭಾಗಗಳಲ್ಲಿ ಸದ್ಯಕ್ಕೆ 5ಜಿ ಇಲ್ಲ. ಮುಂಬೈನ ನಂತರ ದೆಹಲಿ, ಪಂಜಾಬ್, ಬಿಹಾರ ಮತ್ತು ನಂತರ ಕರ್ನಾಟಕದಲ್ಲಿ 5ಜಿ ವಿಸ್ತರಣೆ ನಿರೀಕ್ಷೆಯಿದೆ.

5ಜಿ ಲಭ್ಯವಿರುವ ಸ್ಟೇಡಿಯಂಗಳ ಪಟ್ಟಿ

  • ಬೆಂಗಳೂರು – ಚಿನ್ನಸ್ವಾಮಿ ಸ್ಟೇಡಿಯಂ
  • ಮುಂಬೈ – ವಾಂಖೆಡೆ ಸ್ಟೇಡಿಯಂ
  • ದೆಹಲಿ – ಅರುಣ್ ಜೇಟ್ಲಿ ಸ್ಟೇಡಿಯಂ
  • ವಿಶಾಖಪಟ್ಟಣಂ – ವೈಎಸ್ಸಾರ್ ಎಸಿಎ ಸ್ಟೇಡಿಯಂ
  • ಕೋಲ್ಕತಾ – ಈಡನ್ ಗಾರ್ಡನ್ಸ್
  • ಲಕ್ನೋ – ಏಕಾನ ಸ್ಟೇಡಿಯಂ
  • ಚೆನ್ನೈ – ಎಂಎ ಚಿದಂಬರಂ ಸ್ಟೇಡಿಯಂ
  • ಚಂಡೀಗಡ – ಮಹಾರಾಜ ಯದವೀಂದ್ರ ಸಿಂಗ್ ಸ್ಟೇಡಿಯಂ
  • ಅಹ್ಮದಾಬಾದ್ – ನರೇಂದ್ರ ಮೋದಿ ಸ್ಟೇಡಿಯಂ
  • ಹೈದರಾಬಾದ್ – ರಾಜೀವ್ ಗಾಂಧಿ ಸ್ಟೇಡಿಯಂ
  • ಜೈಪುರ – ಸವಾಯ್ ಮಾನಸಿಂಗ್ ಸ್ಟೇಡಿಯಂ

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version