ವಿಶ್ವಸಂಸ್ಥೆ (United Nation-UN) 1945ರಲ್ಲಿ ಸ್ಥಾಪನೆಯಾದ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶ ಹೊಂದಿದೆ. ಇದು ಪ್ರಪಂಚದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಭಾರತದಂತಹ ದೇಶಗಳಿಗೆ ಮಹತ್ವದ ಪ್ರಯೋಜನ ನೀಡುತ್ತದೆ.
ಭಾರತದಲ್ಲಿ ಹಲವರು ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಛೇರಿ ನ್ಯೂಯಾರ್ಕ್‌ನಲ್ಲಿ ಇದ್ದರೂ, ಪ್ರಪಂಚದ ಅನೇಕ ಸ್ಥಳಗಳಲ್ಲಿ ಇದರ ಕಚೇರಿಗಳು ಇವೆ. UN ನಲ್ಲಿ ಸಲಹಾ ಹುದ್ದೆಗಳು, internship ಮತ್ತು ಸ್ವಯಂಸೇವಾ ಕಾರ್ಯಗಳು ಜನಪ್ರಿಯ ಆಯ್ಕೆಗಳಾಗಿವೆ.
ವಿಶ್ವಸಂಸ್ಥೆಗೆ ಸ್ವಯಂಸೇವಕರ ಅಗತ್ಯವಿದ್ದು, ನಿಯಮಿತವಾಗಿ ಖಾಲಿ ಹುದ್ದೆಗಳ ಪ್ರಕಟಣೆ ಮಾಡುತ್ತದೆ. ಈ ಸ್ವಯಂಸೇವಾ ಕೆಲಸವನ್ನು ಮನೆಯಿಂದಲೇ ಮಾಡಬಹುದಾದ ಅನುಕೂಲವೂ ಇದೆ. UN ಆನ್‌ಲೈನ್ ಸ್ವಯಂಸೇವಕ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ, ಇದರಿಂದ ನೀವು ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗಿದ್ದರೆ, ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ನಿಮಗೆ ಸಿಗುತ್ತದೆ.
ಆನ್‌ಲೈನ್ ಸ್ವಯಂಸೇವಾ ಕೆಲಸ ಹೊಂದಿಕೊಳ್ಳುವಂತಿರುತ್ತದೆ ಮತ್ತು ನಿಮ್ಮ ದಿನಚರಿಯಲ್ಲಿ ಸರಿಹೋಗುವಂತೆ ಮಾಡಬಹುದು. ಇದರಿಂದ ನೀವು ಹೊಸ ಕೌಶಲ್ಯಗಳನ್ನು ಕಲಿಯಬಹುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಭವವನ್ನು ಪಡೆಯಬಹುದು.
UNESCO, WHO, UNICEF, WFP ನಂತಹ ಹಲವಾರು ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು ಸ್ವಯಂಸೇವಾ ಹುದ್ದೆಗಳನ್ನು ನೀಡುತ್ತವೆ.
ಸ್ವಯಂಸೇವಕರಾಗಲು ನೀವು app.unv.org ಗೆ ಭೇಟಿ ನೀಡಿ, ಲಭ್ಯವಿರುವ ಹುದ್ದೆಗಳ ವಿವರಗಳನ್ನು ಪರಿಶೀಲಿಸಿ, ಆನ್‌ಲೈನ್ ಸ್ವಯಂಸೇವಕ ಆಯ್ಕೆ ಮಾಡಿ, ಅಗತ್ಯ ಅರ್ಹತೆಗಳನ್ನು ತಪಾಸಿಸಿ, ನಂತರ ಅರ್ಜಿ ಸಲ್ಲಿಸಬಹುದು.