back to top
25.3 C
Bengaluru
Monday, July 14, 2025
HomeIndiaTamil Nadu ನಲ್ಲಿ ಚುನಾವಣೆ ಭಾವನೆ ಅಳೆಯುತ್ತಿರುವ 'Vote Vibe' ಸಮೀಕ್ಷೆ

Tamil Nadu ನಲ್ಲಿ ಚುನಾವಣೆ ಭಾವನೆ ಅಳೆಯುತ್ತಿರುವ ‘Vote Vibe’ ಸಮೀಕ್ಷೆ

- Advertisement -
- Advertisement -

ಚೆನ್ನೈ: ಖಾಸಗಿ ಸಂಸ್ಥೆ ‘ವೋಟ್ ವೈಬ್’ (Vote Vibe) 2026ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜನಾಭಿಪ್ರಾಯ ತಿಳಿದುಕೊಳ್ಳಲು ತಮಿಳುನಾಡಿನಲ್ಲಿ (Tamil Nadu) ಸಮೀಕ್ಷೆ ನಡೆಸುತ್ತಿದೆ. ಈ ಮೊದಲು ಈ ಸಂಸ್ಥೆ ಕೇರಳದಲ್ಲಿ ಸಮೀಕ್ಷೆ ನಡೆಸಿ ಆಡಳಿತ ವಿರೋಧಿ ಅಲೆ ಕಂಡುಹಿಡಿದಿತ್ತು.

ಸ್ಟಾಲಿನ್ ಸರ್ಕಾರದ ವಿರುದ್ಧ ಅಸಂತೋಷ: ಸಮೀಕ್ಷೆಯ ಪ್ರಕಾರ ಶೇ.32ರಷ್ಟು ಜನರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಆಕ್ರೋಶ ಹೊಂದಿದ್ದಾರೆ. ಮಹಿಳೆಯರಲ್ಲಿ ಶೇ.29% ಮತ್ತು ಪುರುಷರಲ್ಲಿ ಶೇ.34% ಮಂದಿ ಆಡಳಿತದ ವಿರುದ್ಧ ಭಾವನೆ ವ್ಯಕ್ತಪಡಿಸಿದ್ದಾರೆ. ಆಡಳಿತದ ಪರವಾಗಿರುವವರು ಶೇ.17.9% ಮಾತ್ರ. ತಟಸ್ಥ ನಿಲುವು ಹೊಂದಿರುವವರು ಶೇ.15-18% ರಷ್ಟು.

ಯುವಜನತೆಯಲ್ಲಿ ನಿರಾಸೆ ಹೆಚ್ಚು

  • 25-34 ವರ್ಷ ವಯಸ್ಸಿನ ಶೇ.40% ಯುವಕರು ಸರ್ಕಾರದ ವಿರುದ್ಧ ನಿಲುಕಿದ್ದಾರೆ.
  • 18-24 ವಯಸ್ಸಿನವರು ಶೇ.29% ಮಾತ್ರ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.
  • 45-54 ವಯಸ್ಸಿನ ಶೇ.32% ಸರ್ಕಾರ ವಿರೋಧದಲ್ಲಿದ್ದು, ಶೇ.22% ಮಾತ್ರ ಪರವಾಗಿದ್ದಾರೆ.
  • 25-34 ವಯಸ್ಸಿನವರಲ್ಲಿ ಕೇವಲ ಶೇ.12% ಮಾತ್ರ ಸರ್ಕಾರಕ್ಕೆ ಬೆಂಬಲಿಸಿದ್ದಾರೆ.

ಶಾಸಕರ ಕಾರ್ಯಶೈಲಿ ಬಗ್ಗೆ ಜನರ ಅಸಂತೋಷ

  • ಶೇ.38.9% ಜನರು ಶಾಸಕರ ಕೆಲಸದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
  • ಪುರುಷರಲ್ಲಿ ಶೇ.42% ಹಾಗೂ ಮಹಿಳೆಯರಲ್ಲಿ ಶೇ.36% ಶಾಸಕರ ಕಾರ್ಯ ಶ್ಲಾಘನೀಯವಲ್ಲವೆಂದಿದ್ದಾರೆ.
  • 55 ವರ್ಷ ಮೇಲ್ಪಟ್ಟವರಲ್ಲಿ ಶೇ.48% ಶಾಸಕರ ಮೇಲೆ ಅಸಂತೋಷ ವ್ಯಕ್ತಪಡಿಸಿದ್ದಾರೆ.
  • ಕೇವಲ ಶೇ.10-11% ಜನರು ಶಾಸಕರ ಕೆಲಸ ಮೆಚ್ಚಿದ್ದಾರೆ.

ಯಾರಿಗೆ ಅಧಿಕಾರ? ಜನರ ಅಭಿಪ್ರಾಯ

  • ಡಿಎಂಕೆಗೆ ಶೇ.41% ಮಹಿಳೆಯರು ಹಾಗೂ ಶೇ.33% ಪುರುಷರು ಬೆಂಬಲ ನೀಡಿದ್ದಾರೆ.
  • ಎಐಎಡಿಎಂಕೆಗೆ ಶೇ.28% ಮಹಿಳೆಯರು ಹಾಗೂ ಶೇ.36% ಪುರುಷರು ಬೆಂಬಲಿಸಿದ್ದಾರೆ.
  • ಟಿವಿಕೆಗೆ ಶೇ.13% ಮಹಿಳೆಯರು ಮತ್ತು ಶೇ.11% ಪುರುಷರು ಬೆಂಬಲ ವ್ಯಕ್ತಪಡಿಸಿದ್ದಾರೆ.
  • ಎಐಎಡಿಎಂಕೆ-ಬಿಜೆಪಿ ಮೈತ್ರಿ ಬೇಕೆ?
  • ಶೇ.38% ಮಹಿಳೆಯರು ಹಾಗೂ ಶೇ.45% ಪುರುಷರು ಮೈತ್ರಿಗೆ ಒಪ್ಪಿದ್ದಾರೆ.
  • ಶೇ.37% ಮಹಿಳೆಯರು ಮತ್ತು ಶೇ.32% ಪುರುಷರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page