back to top
25 C
Bengaluru
Thursday, July 24, 2025
HomeKarnatakaChikkaballapuraಮತದಾನದ ಜಾಗೃತಿ ಜಾಥಾ

ಮತದಾನದ ಜಾಗೃತಿ ಜಾಥಾ

- Advertisement -
- Advertisement -

Gauribidanur : ಗೌರಿಬಿದನೂರು ನಗರದ ಕೋಟೆ ಬಾಲಕಿಯರ ಸರ್ಕಾರಿ ‌ಪ್ರೌಢಶಾಲೆಯಲ್ಲಿ ಶನಿವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮತ್ತು ಮತದಾನದ ಜಾಗೃತಿ ಜಾಥಾಗೆ (Voter awareness jatha) ಚಾಲನೆ ನೀಡಲಾಯಿತ್ತು. ಶಾಲೆಯಿಂದ ಆರಂಭಗೊಂಡ ಮತದಾನದ ಜಾಗೃತಿ‌ ಜಾಥಾ ಬಿ.ಎಚ್ ರಸ್ತೆಯ ಮೂಲಕ ಎನ್.ಸಿ ನಾಗಯ್ಯ ವೃತ್ತ, ಅಂಬೇಡ್ಕರ್ ವೃತ್ತ, ಎಂ.ಜಿ ವೃತ್ತದ ಮೂಲಕ ಬಜಾರ್ ರಸ್ತೆಯಲ್ಲಿ ಸಾಗಿ ಶಾಲಾ ಆವರಣದ ಬಳಿ ಬಂದರು.

ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ ಇಒ ಆರ್.ಹರೀಶ್ “ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದ್ದು ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ‌ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು ಇತರರಿಗೆ ತಿಳಿಸುವ ಮೂಲಕ ಸಂವಿಧಾನದ ಆಶಯ ‌ಉಳಿಸಬೇಕು. ವಿದ್ಯಾರ್ಥಿಗಳು ಮತದಾನದ ಮಹತ್ವ ಮತ್ತು ಸಂವಿಧಾನದ ಆಶಯಗಳ ಬಗ್ಗೆ ಅರಿತು ಪೋಷಕರಿಗೆ ತಿಳಿಸಬೇಕು” ಎಂದು ಹೇಳಿದರು.

ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ಮುಖ್ಯ ಶಿಕ್ಷಕ ಬಿ.ಕೆ.ರಾಮಚಂದ್ರ, ನಗರಸಭೆ ಆಯುಕ್ತೆ ಡಿ.ಎಂ.ಗೀತಾ, ನೋಡಲ್ ಅಧಿಕಾರಿ ಹನುಮಂತರಾಯಪ್ಪ, ಜಿಲ್ಲಾ ತರಬೇತುದಾರ ಜಿ.ಸಿ.ರಾಮಚಂದ್ರಯ್ಯ, ಪಿ.ಅಂಬುಜಾ, ಎಸ್.ಪದ್ಮಾವತಿ, ಶಬ್ರಿನ್ ತಾಜ್, ಸಕ್ರಗೌಡ, ಕೆ.ವೈ.ಚಂದ್ರಪ್ಪ, ಜಿ.ಎನ್.ಸುಮ, ಲಕ್ಷ್ಮಿದೇವಮ್ಮ, ಕಲಾವತಮ್ಮ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

The post ಮತದಾನದ ಜಾಗೃತಿ ಜಾಥಾ appeared first on Chikkaballapur.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page