‘ವಾರ್ 2’ (War 2) ಸಿನಿಮಾ ಆಗಸ್ಟ್ 14 ರಂದು ಬಿಡುಗಡೆಯಾಗಿ, ಬಾಲಿವುಡ್ ಮತ್ತು ದಕ್ಷಿಣ ಭಾರತದ ಇಬ್ಬರು ಸೂಪರ್‌ಸ್ಟಾರ್‌ಗಳು ಮೊದಲ ಬಾರಿಗೆ ಒಂದೇ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸೇರಿದಂತೆ ಹಲವು ನಗರಗಳಲ್ಲಿ ಅರ್ಲಿ ಮಾರ್ನಿಂಗ್ ಶೋ ನಡೆದಿದ್ದು, ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಜೂ NTR ಅಭಿನಯ ಶ್ಲಾಘನೆ: ಹಲವರು ಜೂ ಎನ್ಟಿಆರ್ ತಮ್ಮ ವೃತ್ತಿಜೀವನದ ಅತ್ಯುತ್ತಮ ನಟನೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಹೃತಿಕ್ ಮತ್ತು ಜೂ NTR ಎದುರುಬದುರಿನ ದೃಶ್ಯಗಳು ಹಾಗೂ ಹಿನ್ನೆಲೆ ಸಂಗೀತ ಮೆಚ್ಚುಗೆಗೆ ಪಾತ್ರವಾಗಿದೆ.
ವಿದೇಶಿ ಪ್ರೇಕ್ಷಕರ ಪ್ರತಿಕ್ರಿಯೆ: ಬ್ರಿಟನ್ ನ ಪ್ರೇಕ್ಷಕರು, ಸಿನಿಮಾ ಇಂಟರ್ವೆಲ್‌ವರೆಗೆ ಭಾರೀ ಮಟ್ಟದಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಆಕ್ಷನ್, ಮಾಸ್ ಸೀಕ್ವೆನ್ಸ್, ಟ್ವಿಸ್ಟ್ ಹಾಗೂ ಹಾಡುಗಳು ಉತ್ತಮವಾಗಿವೆ.
ಟೈಗರ್ ಪಾತ್ರ ಮೆಚ್ಚುಗೆ: ಕೆಲವು ಅಭಿಮಾನಿಗಳು ಟೈಗರ್ ಶ್ರಾಫ್ ಪಾತ್ರ, ಎಂಟ್ರಿ ಸೀನ್ ಗಳು ಮತ್ತು ಕ್ಲೈಮ್ಯಾಕ್ಸ್ ಬಗ್ಗೆ ಪ್ರಶಂಸೆ ಮಾಡಿದ್ದಾರೆ.
ಮಿಶ್ರ ಅಭಿಪ್ರಾಯ: ‘ದಿ ವೀವ್’ ಖಾತೆ, ಸಿನಿಮಾ ಸರಾಸರಿ ಮಟ್ಟದಲ್ಲಿದೆ, ಅತಿಯಾದ ನಿರೀಕ್ಷೆ ಇಡುವುದು ಬೇಡ ಎಂದು ಅಭಿಪ್ರಾಯಪಟ್ಟಿದೆ. ಆದರೆ ಜೂ ಎನ್ಟಿಆರ್ ಅವರಿಗೆ ಕೆಲವು ಅದ್ಭುತ ಸೀನ್ ಗಳಿವೆ ಎಂದು ಹೇಳಿದ್ದಾರೆ.
ದ್ವಿತೀಯಾರ್ಧ ನಿಧಾನ: ಶ್ರೀಹರ್ಷತ್, ಮೊದಲಾರ್ಧ ಆಕ್ಷನ್ ಮತ್ತು ಟ್ವಿಸ್ಟ್‌ಗಳಿಂದ ತುಂಬಿದೆ, ಆದರೆ ಎರಡನೇ ಭಾಗ ತುಸು ನಿಧಾನವಾಗಿದೆ. ಕ್ಲೈಮ್ಯಾಕ್ಸ್ ಚೆನ್ನಾಗಿದೆ, ಕಿಯಾರಾ ಅಡ್ವಾನಿ ಸ್ಟೈಲ್ ಮತ್ತು ಗ್ಲಾಮರ್ ಸೇರಿಸಿದ್ದಾರೆ ಎಂದು ತಿಳಿಸಿದ್ದಾರೆ.