Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಚೀನಾವನ್ನು ಗುರಿಯಾಗಿಸಿಕೊಂಡಿದ್ದಾರೆ. ಚೀನಾ ಅಮೆರಿಕಗೆ ವಿರಳ ಭೂ ಅಯಸ್ಕಾಂತಗಳು (Rare earth magnets) ನೀಡದಿದ್ದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಹೇಳುವಂತೆ, “ಚೀನಾ ನಮಗೆ ಮ್ಯಾಗ್ನೆಟ್ ಒದಗಿಸಬೇಕು. ನೀಡದಿದ್ದರೆ ನಾವು 200% ಟ್ಯಾರಿಫ್ ಹಾಕುತ್ತೇವೆ. ಅದರಲ್ಲಿ ನಮಗೆ ಏನೂ ಸಮಸ್ಯೆ ಇಲ್ಲ” ಎಂದಿದ್ದಾರೆ.
ವಿರಳ ಭೂ ಖನಿಜಗಳು ಇಂದಿನ ಎಲೆಕ್ಟ್ರಿಕ್ ವಾಹನಗಳು, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ಉದ್ಯಮಕ್ಕೆ ಅತ್ಯಗತ್ಯ. ಕಡಿಮೆ ಗಾತ್ರದಲ್ಲೇ ಹೆಚ್ಚಿನ ಮ್ಯಾಗ್ನೆಟಿಕ್ ಶಕ್ತಿ ಇರುವುದರಿಂದ ಇವುಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬೇಡಿಕೆ ಇದೆ. ಈ ಉತ್ಪಾದನೆಯಲ್ಲಿ ಚೀನಾ ವಿಶ್ವದ ಅಗ್ರಸ್ಥಾನದಲ್ಲಿದೆ.
ವಾಷಿಂಗ್ಟನ್‌ನಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮ್ಯೂಂಗ್ ಅವರನ್ನು ಭೇಟಿಯಾದ ನಂತರ ಟ್ರಂಪ್ ಮಾಧ್ಯಮದ ಮುಂದೆ ಮಾತನಾಡಿ, ಚೀನಾ ವಿಚಾರದಲ್ಲಿ ನೇರ ಬೆದರಿಕೆ ಹಾಕಿದರು.
“ಅವರ ಬಳಿ ಅಸ್ತ್ರಗಳಿವೆ, ನಮ್ಮ ಬಳಿ ಅದಕ್ಕಿಂತಲೂ ದೊಡ್ಡ ಅಸ್ತ್ರಗಳಿವೆ. ನಾವು ಉಪಯೋಗಿಸಲು ಬಯಸುವುದಿಲ್ಲ. ಆದರೆ ಒಂದು ವೇಳೆ ಬಳಸಿದರೆ ಚೀನಾ ನಾಶವಾಗುತ್ತದೆ” ಎಂದು ಟ್ರಂಪ್ ಘೋಷಿಸಿದ್ದಾರೆ.
ಶೀಘ್ರದಲ್ಲೇ ಟ್ರಂಪ್ ಚೀನಾಗೆ ಭೇಟಿ ನೀಡುವ ಸಾಧ್ಯತೆಯೂ ಇದೆ ಎಂದು ವರದಿ ತಿಳಿಸಿದೆ.