Delhi: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಶ್ಚಿಮ ಏಷ್ಯಾದಲ್ಲಿನ (West Asia) ಬಿಕ್ಕಟ್ಟಿನ ಕುರಿತು ಸರ್ಕಾರದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಭದ್ರತೆಯ ಕ್ಯಾಬಿನೆಟ್ ಸಮಿತಿಯ (Cabinet Committee on Security) ತುರ್ತು ಸಭೆಯನ್ನು (Emergency Meeting) ಕರೆದಿದ್ದಾರೆ.
ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಹಣಕಾಸು ಸಚಿವರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನು ಒಳಗೊಂಡ ಸಮಿತಿಯು ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ (Israel) ಮೇಲೆ ಇರಾನ್ ನ (Iran) ಕ್ಷಿಪಣಿ ದಾಳಿಯ ನಂತರದ ತೀವ್ರ ಉಲ್ಬಣ ಮತ್ತು ಮಧ್ಯಪ್ರಾಚ್ಯದಲ್ಲಿನ ಹೊಸ ಹಗೆತನದ ಬಗ್ಗೆ ವಿವರವಾಗಿ ಚರ್ಚಿಸಿತು.
ಭಾರತವು ಸಂಘರ್ಷದಲ್ಲಿ ತೊಡಗಿರುವ ಎಲ್ಲಾ ಪಕ್ಷಗಳು ರಾಜತಾಂತ್ರಿಕತೆ ಮತ್ತು ಸಂವಾದದ ಮೂಲಕ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಿಕೊಳ್ಳಲು ಒತ್ತಾಯಿಸಿದೆ. ನಡೆಯುತ್ತಿರುವ ಸಂಘರ್ಷವು ‘ವಿಶಾಲವಾದ ಪ್ರಾದೇಶಿಕ ಆಯಾಮವನ್ನು ತೆಗೆದುಕೊಳ್ಳಬಾರದು’ ಎಂದು ಭಾರತ ಹೇಳಿದೆ ಎಂದು ವರದಿ ತಿಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಸೃಷ್ಟಿಯಾಗಿರುವ ಸಂಘರ್ಷದಿಂದ ಪೆಟ್ರೋಲಿಯಂ ಉತ್ಪನ್ನ, ವ್ಯಾಪಾರ ಮತ್ತು ಪೂರೈಕೆಯ ಮೇಲೆ ಭಾರೀ ಪ್ರಭಾವ ಬೀರುವ ಆತಂಕ ಎದುರಾಗಿದೆ ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕೆಂಪು ಸಮುದ್ರದ ಬಿಕ್ಕಟ್ಟು ಕಳೆದ ವರ್ಷ ಅಕ್ಟೋಬರ್ನಲ್ಲಿ ಪ್ರಾರಂಭವಾಯಿತು, ಇರಾನ್ ಬೆಂಬಲಿತ ಹೌತಿ ಈ ಪ್ರದೇಶದಲ್ಲಿ ಜಾಗತಿಕ ವ್ಯಾಪಾರವನ್ನು ಅಡ್ಡಿಪಡಿಸಿತ್ತು.
ಭಾರತಕ್ಕೆ ಇದು ಪೆಟ್ರೋಲಿಯಂ ರಫ್ತುಗಳ ಮೇಲೆ ಪರಿಣಾಮ ಬೀರಿತು, 2023ರ ಆರ್ಥಿ ವರ್ಷದಲ್ಲಿ ಭಾರತದ ಒಟ್ಟಾರೆ ಸರಕು ವ್ಯಾಪಾರ (ರಫ್ತು ಮತ್ತು ಆಮದು ಸೇರಿ) 94 ಲಕ್ಷ ಕೋಟಿ ರೂಪಾಯಿಗಳಾಗಿದ್ದು, 95 ಪ್ರತಿಶತ ಸಮುದ್ರದ ಮೂಲಕ ರವಾನಿಸಲಾಗಿದೆ.
ಸಂಘರ್ಷ ಮುಂದುವರೆದರೆ ಭಾರತಕ್ಕೆ ದೊಡ್ಡ ತಲೆ ನೋವು ಎದುರಾಗಲಿದೆ ಪೆಟ್ರೋಲಿಯಂ ಹಾಗೂ ಅದರ ಉತ್ಪನ್ನಗಳ ಪೂರೈಕೆಯಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ಇದರಿಂದ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.