ಭಾರತ ಇದೀಗ UAE ನಲ್ಲಿ ಏಷ್ಯಾಕಪ್ ಟಿ20 ಪಂದ್ಯಗಳನ್ನು ಆಡುತ್ತಿದೆ. ಈ ಟೂರ್ನಿ ಮುಗಿದ ಬಳಿಕ ಭಾರತ ತವರಿನಲ್ಲಿ ವೆಸ್ಟ್ ಇಂಡೀಸ್ (West Indies) ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಇನ್ನೂ ಭಾರತ ತಂಡವನ್ನು ಪ್ರಕಟಿಸಿಲ್ಲ. ಆದರೆ ವೆಸ್ಟ್ ಇಂಡೀಸ್ ತಂಡವನ್ನು ಈಗಾಗಲೇ ಘೋಷಿಸಲಾಗಿದೆ.
ವೆಸ್ಟ್ ಇಂಡೀಸ್ ತಂಡವನ್ನು ರೋಸ್ಟನ್ ಚೇಸ್ ಮುನ್ನಡೆಸಲಿದ್ದಾರೆ. ಯುವ ಆಟಗಾರರಿಗೆ ಕೂಡ ಅವಕಾಶ ನೀಡಲಾಗಿದೆ. ಭಾರತದ ಪಿಚ್‌ಗಳನ್ನು ಗಮನದಲ್ಲಿಟ್ಟು ತಂಡವನ್ನು ಪ್ರಕಟಿಸಲಾಗಿದೆ.
- ಮೊದಲ ಟೆಸ್ಟ್: ಅಕ್ಟೋಬರ್ 2ರಿಂದ ಅಹಮದಾಬಾದ್‌ನಲ್ಲಿ
- ಎರಡನೇ ಟೆಸ್ಟ್: ಅಕ್ಟೋಬರ್ 10ರಿಂದ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ
ಇದು 7 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ. ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವೆಸ್ಟ್ ಇಂಡೀಸ್ 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಭಾರತ 5 ಪಂದ್ಯಗಳಲ್ಲಿ 2 ಜಯ, 2 ಸೋಲು ಕಂಡಿದೆ.
ಈ ಸರಣಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಿದ್ದಾರೆ. ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ ಟೆಗ್ನನಾರಾಯಣ್ ಚಂದ್ರಪಾಲ್, ಅಲಿಕ್ ಅಥಾನಾಜೆ, ಸ್ಪಿನ್ನರ್ ಖಾರಿ ಪಿಯರೆ ಇವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 24ರಂದು ವೆಸ್ಟ್ ಇಂಡೀಸ್ ತಂಡ ಅಹಮದಾಬಾದ್ ತಲುಪಲಿದೆ.
ವೆಸ್ಟ್ ಇಂಡೀಸ್ ತಂಡ: ರೋಸ್ಟನ್ ಚೇಸ್ (ನಾಯಕ), ಜೊಮ್ಮೆಲ್ ವಾರಿಕನ್ (ಉಪನಾಯಕ), ಕೆವಲನ್ ಆಂಡರ್ಸನ್, ಅಲಿಕ್ ಅಥಾನಾಜೆ, ಜಾನ್ ಕ್ಯಾಂಪ್ಬೆಲ್, ಟೆಗ್ನನಾರಾಯಣ್ ಚಂದ್ರಪಾಲ್, ಜಸ್ಟಿನ್ ಗ್ರೀವ್ಸ್, ಶೈ ಹೋಪ್, ಟೆವಿನ್ ಇಮ್ಲಾಚ್, ಅಲ್ಜಾರಿ ಜೋಸೆಫ್, ಶಮರ್ ಜೋಸೆಫ್, ಬ್ರಾಂಡನ್ ಕಿಂಗ್, ಆಂಡರ್ಸನ್ ಫಿಲಿಪ್, ಖಾರಿ ಪಿಯರೆ, ಜೇಡೆನ್ ಸೀಲ್ಸ್.