back to top
25.8 C
Bengaluru
Friday, August 1, 2025
HomeEntertainment"Dangal" ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆ ಆಗದಿದ್ದು ಏಕೆ? Aamir Khan ಸ್ಪಷ್ಟನೆ

“Dangal” ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆ ಆಗದಿದ್ದು ಏಕೆ? Aamir Khan ಸ್ಪಷ್ಟನೆ

- Advertisement -
- Advertisement -

ಅಮೀರ್ ಖಾನ್ (Aamir Khan) ಅಭಿನಯದ ‘Dangal’ ಸಿನಿಮಾ 2000 ಕೋಟಿ ರೂಪಾಯಿಗಳಷ್ಟು ಭಾರೀ ಕಲೆಕ್ಷನ್ ಮಾಡಿದರೂ, ಈ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿಲ್ಲ. ಏಕೆಂದರೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ, ಚಿತ್ರದಲ್ಲಿ ಇರಬಹುದಾದ ಎರಡು ಪ್ರಮುಖ ದೃಶ್ಯಗಳನ್ನು ತೆಗೆದುಹಾಕುವಂತೆ ಕೇಳಿತ್ತು – ಭಾರತೀಯ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ.

ಇದು ಕೇಳುತ್ತಿದ್ದೇ ಅಮೀರ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪಾಕಿಸ್ತಾನದಲ್ಲಿ ಸಿನಿಮಾ ಬಿಡುಗಡೆ ಮಾಡದೇ ನಿರ್ಧಾರ ತೆಗೆದುಕೊಂಡರು. ಆಮೀರ್ ಖಾನ್ ಹೇಳಿದಂತೆ, “ನಮ್ಮ ಧ್ವಜ ಹಾಗೂ ಗೀತೆಯನ್ನು ತೆಗೆದುಹಾಕಲು ಯಾರು ಹೇಳಿದರೂ, ನಾನು ಚಿತ್ರ ಬಿಡುಗಡೆ ಮಾಡೋದಿಲ್ಲ. ನನಗೆ ಅದರಲ್ಲಿರುವ ಲಾಭ ಬೇಕಾಗಿಲ್ಲ.”

ಅವರು ಈ ವಿಷಯವನ್ನು ಇತ್ತೀಚೆಗಿನ “ಆಪ್ ಕಿ ಅದಾಲತ್” ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದರು. 2016 ರಲ್ಲಿ ಈ ಪ್ರಕರಣ ನಡೆದಿದ್ದು, ನಿರ್ಮಾಪಕರು ಕಲೆಕ್ಷನ್ ನಷ್ಟವಾಗಬಹುದು ಎಂದು ಹೇಳಿದ್ದರೂ, ಅಮೀರ್ ಖಾನ್ ಅವರು ದೇಶದ ಗೌರವಕ್ಕೆ ಮಹತ್ವ ನೀಡಿದರು.

ಇದೇ ವೇಳೆ, ಭಾರತ ಸರ್ಕಾರ ಪಾಕಿಸ್ತಾನ ಮೂಲದ ಕಲಾವಿದರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸಿರುವುದಲ್ಲದೇ, ಅವರ ಚಿತ್ರಗಳು, ಹಾಡುಗಳು, ವೆಬ್‌ಸೀರಿಸ್ ಹಾಗೂ podcasts ಗಳನ್ನು ತಕ್ಷಣದಿಂದ ನಿಲ್ಲಿಸಲು OTT platform ಗಳಿಗೆ ಸೂಚನೆ ನೀಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page