Home News ವಿಂಬಲ್ಡನ್ ನಿಂದ ಪ್ರಸಿದ್ಧ ‘ನಾಟು ನಾಟು’ ಪೋಸ್ಟರ್

ವಿಂಬಲ್ಡನ್ ನಿಂದ ಪ್ರಸಿದ್ಧ ‘ನಾಟು ನಾಟು’ ಪೋಸ್ಟರ್

Wimbledon Naatu Naatu Poster

ವಿಶ್ವ ಟೆನಿಸ್ ಚಾಂಪಿಯನ್ಷಿಪ್ ವಿಂಬಲ್ಡನ್‌ನ (Wimbledon) ಅಧಿಕೃತ ಟ್ವಿಟ್ಟರ್ ಖಾತೆಯು ಒಂದು ಅದ್ಭುತವಾದ ಟ್ವಿಸ್ಟ್ ನೀಡಿದೆ! ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಮತ್ತು ಜನಪ್ರಿಯ ನೊವಾಕ್ ಜೊಕೊವಿಕ್ Carlos Alcaraz and Novak Djokovic) ಅವರನ್ನು ಒಳಗೊಂಡ ಸಖ್ಖತ್ ಪೋಸ್ಟರ್ ಅನ್ನು ಶೇರ್ ಮಾಡಿದೆ. ಆದರೆ ಮೋಜಿನ ಭಾಗ ಎಂದರೆ – ಪೋಸ್ಟರ್ ನಲ್ಲಿ ಇಬ್ಬರೂ ಆಟಗಾರರು ಜನಪ್ರಿಯ ಭಾರತೀಯ ಟ್ರ್ಯಾಕ್ ‘ನಾಟು ನಾಟು’ ಗೆ ನೃತ್ಯ ಮಾಡುತ್ತಿದ್ದಾರೆ!

“ಕಾರ್ಲೋಸ್ ಅಲ್ಕರಾಜ್ ಮತ್ತು ನೊವಾಕ್ ಜೊಕೊವಿಕ್, ವಿಂಬಲ್ಡನ್‌ಗೆ ಇಬ್ಬರೂ ಅಗ್ರ ಆಟಗಾರರು ಸಿದ್ಧರಾಗಿದ್ದಾರೆ.” ಎಂದು ವಿಂಬಲ್ಡನ್ ಅದಕ್ಕೆ ಶೀರ್ಷಿಕೆ ನೀಡಿದೆ, ನಿಮಗೆ ನಂಬಲು ಸಾಧ್ಯವೇ? ಪ್ರಪಂಚದಾದ್ಯಂತ ಹರಡುತ್ತಿರುವ ನಮ್ಮದೇ ಆದ ಭಾರತೀಯ ಸುವಾಸನೆ! ಅಭಿಮಾನಿಗಳು ಉತ್ಸಾಹದಿಂದ ಈ ಪೋಸ್ಟರ್ ಗೆ ಪ್ರತಿಕ್ರಿಯಿಸುತ್ತಿದ್ದಾರೆ. ನಾಟು ನಾಟು ಡಾಮಿನೇಷನ್ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು “ಎಲ್ಲೆಡೆ ಭಾರತ!” ಎಂದಿದ್ದಾರೆ.

ವಿಂಬಲ್ಡನ್‌ನಂತಹ ಪ್ರತಿಷ್ಠಿತ ಸಮಾರಂಭದಲ್ಲಿ ಭಾರತೀಯ ಸೊಗಡನ್ನು ಸೇರಿರುವುದು ನೋಡಲು ಅದ್ಭುತವಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version