Infosys ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (co-founder Narayana Murthy) ಅವರು ಯವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಅವರ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ದೇಶದ ಅಭಿವೃದ್ಧಿಗೆ ಯುವಕರು ಕಠಿಣ ಪರಿಶ್ರಮ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಮಾತುಗಳನ್ನು ಅವರು ಹೇಳಿದ್ದರು.
ನಾರಾಯಣ ಮೂರ್ತಿ ಅವರ ಹೇಳಿಕೆಗೆ ತಕ್ಷಣದ ಪ್ರತಿಕ್ರಿಯೆ ನೀಡದೆ, ಗೌತಮ್ ಅದಾನಿ ಅವರು ಕೆಲಸ ಮತ್ತು ಜೀವನದ ಸಮತೋಲನದ ಬಗ್ಗೆ ಹಾಸ್ಯಮಯ ಹೇಳಿಕೆಯನ್ನು ನೀಡಿದ್ದಾರೆ. ” ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಹೋಗುವವರಿಗೆ, ಬದುಕಿನಲ್ಲಿ ಸಮತೋಲನ ಹೇಗೆ ಸಾಧ್ಯ?” ಎಂದು ಅವರು ವ್ಯಂಗ್ಯವಾಗಿ ಮಾತಾಡಿದರು.
ಅದಾನಿಯ ಪ್ರಕಾರ, ಕೆಲಸ ಮತ್ತು ಜೀವನದ ಸಮತೋಲನ ವೈಯಕ್ತಿಕ ಆಯ್ಕೆಯ ವಿಚಾರವಾಗಿದೆ. “ನಾನು ಕೆಲಸವನ್ನು ಆನಂದಿಸುತ್ತೇನೆ, ಹಾಗಾಗಿ ಅದು ನನ್ನ ಜೀವನದ ಭಾಗವಾಗಿದೆ. ಆದರೆ ಕೆಲಸಕ್ಕೆ ಮತ್ತು ಕುಟುಂಬಕ್ಕೆ ಸಮಾನ ಪ್ರಾಮುಖ್ಯತೆ ಕೊಡುವುದು ಪ್ರತಿಯೊಬ್ಬರ ಉದ್ದೇಶವಾಗಬೇಕು,” ಎಂದು ಅವರು ಹೇಳಿದ್ದಾರೆ.
ಎರಡೂ ಹೇಳಿಕೆಗಳು ತಮ್ಮದೇ ಆದ ದೃಷ್ಠಿಕೋನವನ್ನು ಹೊಂದಿದ್ದು, ಯುವಕರಲ್ಲಿ ಪರಿಶ್ರಮದ ಮಹತ್ವವನ್ನು ಒತ್ತಿ ಹೇಳುತ್ತವೆ. ಆದರೆ, ಇದು ವೈಯಕ್ತಿಕ ಜೀವನಕ್ಕೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬ ಚರ್ಚೆ ಮುಂದುವರಿಯುತ್ತಿದೆ.
ಕಠಿಣ ಪರಿಶ್ರಮ ಹಾಗೂ ಜೀವನದ ಸಂತೋಷವನ್ನು ಸಮತೋಲನದಲ್ಲಿ ಇಡಲು ಒಬ್ಬರ ಆದ್ಯತೆ ಹಾಗೂ ಆಯ್ಕೆಗಳೇ ಮುಖ್ಯವಾಗಿದೆ.