back to top
20.8 C
Bengaluru
Sunday, August 31, 2025
HomeNewsWorld Hydrography Day: ಮಹತ್ವ ಮತ್ತು ಉದ್ದೇಶ

World Hydrography Day: ಮಹತ್ವ ಮತ್ತು ಉದ್ದೇಶ

- Advertisement -
- Advertisement -

ವಿಶ್ವ ಹೈಡ್ರೋಗ್ರಫಿ ದಿನವನ್ನು (World Hydrography Day) ಪ್ರತಿ ವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ ಹೈಡ್ರೋಗ್ರಫಿ (ಜಲಮೂಲಗಳ ಅಳತೆ ಮತ್ತು ವಿವರಿಸುವ ಶಾಸ್ತ್ರ) ಯ ಮಹತ್ವವನ್ನು ಪ್ರಚಾರ ಮಾಡುವುದು.

ಹೈಡ್ರೋಗ್ರಫಿ ಎಂದರೇನು?: ಹೈಡ್ರೋಗ್ರಫಿಯು ಸಾಗರ, ನದಿ, ಸಮುದ್ರದ ಆಳ, ಬಂಡೆ, ಭಗ್ನಾವಶೇಷಗಳು ಮುಂತಾದ ಜಲದ ಅಡಗಿನ ಅಂಶಗಳನ್ನು ಅಳೆಯುವ ಶಾಸ್ತ್ರವಾಗಿದೆ. ಇದಕ್ಕಾಗಿ ಸ್ಪೆಷಲ್ ಹಡಗುಗಳು, ದೋಣಿಗಳು, ಲೇಸರ್ ಉಪಕರಣಗಳು ಹಾಗೂ ಉಪಗ್ರಹಗಳನ್ನು ಬಳಸಲಾಗುತ್ತದೆ.

ಈ ದಿನದ ಇತಿಹಾಸ ಮತ್ತು ಉದ್ದೇಶ

  • ವಿಶ್ವಸಂಸ್ಥೆಯು 2005ರಲ್ಲಿ ಈ ದಿನವನ್ನು ಅಧಿಕೃತವಾಗಿ ಘೋಷಿಸಿದೆ.
  • ಅಂತರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆ (IHO) 1921ರಲ್ಲಿ ಸ್ಥಾಪನೆಗೊಂಡಿದ್ದು, ಈ ಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
  • ದಿನದ ಉದ್ದೇಶ
  • ಸುರಕ್ಷಿತ ನೌಕಾ ಸಂಚಾರ
  • ಸಮುದ್ರ ಸಂಪತ್ತುಗಳ ಸಂರಕ್ಷಣೆ
  • ಕರಾವಳಿ ಅಭಿವೃದ್ಧಿಗೆ ಹೈಡ್ರೋಗ್ರಫಿಯ ಮಹತ್ವವನ್ನು ಹಂಚಿಕೊಳ್ಳುವುದು
  • 2024ರ ಥೀಮ್: ಸಾಗರದಾಳದ ನಕ್ಷೆ – ಸಾಗರ ಕ್ರಿಯೆ ಸಕ್ರಿಯಗೊಳಿಸುವುದು
  • ಈ ವರ್ಷದ ಥೀಮ್, IHO ಗುರಿಗಳಾದ,
  • ಸಮುದ್ರದ ತಿಳುವಳಿಕೆ ಮತ್ತು ಸುಸ್ಥಿರ ಬಳಕೆ
  • ಸಾಮಾಜಿಕ ಪ್ರಯೋಜನಕ್ಕಾಗಿ ಡೇಟಾ ಬಳಕೆ ಅನ್ನು ಉತ್ತೇಜಿಸುತ್ತದೆ.

ಹೈಡ್ರೋಗ್ರಫಿಯ ಪ್ರಾಯೋಜನಗಳು

  • ಜಲವಿಜ್ಞಾನವು ಹಲವಾರು ಕ್ಷೇತ್ರಗಳಲ್ಲಿ ಉಪಯುಕ್ತವಾಗಿದೆ
  • ನಾವಿಕ ಸಂಚಾರದ ಸುರಕ್ಷತೆ
  • ಪ್ರವಾಸೋದ್ಯಮ
  • ಸಮುದ್ರ ಪರಿಸರದ ಸಂರಕ್ಷಣೆ
  • ಮೀನುಗಾರಿಕೆ, ತೈಲ, ಅನಿಲ ಶೋಧನೆ
  • ಕರಾವಳಿ ನಿರ್ವಹಣೆ
  • ಸುನಾಮಿ ಮುನ್ಸೂಚನೆ

ಭಾರತದಲ್ಲಿ ಹೈಡ್ರೋಗ್ರಫಿಯ ಸ್ಥಿತಿ

  • ಭಾರತೀಯ ನೌಕಾ ಹೈಡ್ರೋಗ್ರಾಫಿಕ್ ಇಲಾಖೆ (INHD) ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.
  • 1874ರಲ್ಲಿ ಸ್ಥಾಪನೆಗೊಂಡ ಈ ಇಲಾಖೆ ಇಂದು ಹೆಚ್ಚು ತಾಂತ್ರಿಕ ಸಜ್ಜಿಕೆಯಿಂದ ಕಾರ್ಯನಿರ್ವಹಿಸುತ್ತಿದೆ.
  • ದೇಶೀಯವಾಗಿ ನಿರ್ಮಿಸಲಾದ 7 ಸಮೀಕ್ಷಾ ಹಡಗುಗಳು, ತರಬೇತಿ ಸಂಸ್ಥೆಗಳು ಇದರಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
  • 2023ರಲ್ಲಿ 6.5 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ನ್ಯಾವಿಗೇಶನ್ ಚಾರ್ಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.
  • 2025ರ ವಿಶ್ವ ಸಾಗರ ಸಮ್ಮೇಳನದ ಹಿನ್ನೆಲೆಯಲ್ಲಿ ಭಾರತ ಸಾಗರ ಉಪಕ್ರಮಗಳನ್ನು ಉತ್ತೇಜಿಸುತ್ತಿದೆ.

 

ಅಂತರರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆ (IHO)

  • 1921ರಲ್ಲಿ ಸ್ಥಾಪಿತ ಈ ಸಂಸ್ಥೆ, ಸಮುದ್ರ ಸಮೀಕ್ಷೆಯ ಪ್ರಮಾಣಿತ ರೀತಿಗಳನ್ನು ಉತ್ತೇಜಿಸುತ್ತದೆ.
  • ಎಲ್ಲಾ ದೇಶಗಳು ನಾವಿಕ ಸಂಚಾರ ಹಾಗೂ ಸಂಶೋಧನೆಗಾಗಿ ಹೈಡ್ರೋಗ್ರಾಫಿಕ್ ಮಾಹಿತಿ ಬಳಸುವಂತೆ ಮಾಡುತ್ತದೆ.
  • ಸದಸ್ಯ ರಾಷ್ಟ್ರಗಳ ಸಾಮರ್ಥ್ಯ ವೃದ್ಧಿ ಹಾಗೂ ಡೇಟಾ ಬಳಕೆಯಲ್ಲಿ ಸಹಕಾರವನ್ನು ಬೆಳೆಸುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page