back to top
26.7 C
Bengaluru
Wednesday, July 30, 2025
HomeKarnatakaTumkur ನಲ್ಲಿ ವಿಶ್ವದ ಅತಿ ಎತ್ತರದ Aqueduct–ಎತ್ತಿನಹೊಳೆ ಯೋಜನೆಯ ವಿಶೇಷತೆಗಳು

Tumkur ನಲ್ಲಿ ವಿಶ್ವದ ಅತಿ ಎತ್ತರದ Aqueduct–ಎತ್ತಿನಹೊಳೆ ಯೋಜನೆಯ ವಿಶೇಷತೆಗಳು

- Advertisement -
- Advertisement -

ತುಮಕೂರಿನಲ್ಲಿ (Tumkur) ಎತ್ತಿನಹೊಳೆ ಯೋಜನೆಯ ಭಾಗವಾಗಿ ನಿರ್ಮಾಣವಾದ ಅಕ್ವಾಡಕ್ಟ್ (Aqueduct-ಮೇಲ್ಗಾಲುವೆ) ಪ್ರಪಂಚದ ಅತಿ ಎತ್ತರದ ಅಕ್ವಾಡಕ್ಟ್‌ಗಳ (Aqueduct) ಪೈಕಿ ಒಂದಾಗಿದೆ. ಇದರ ಉದ್ದ ಸುಮಾರು 10.4 ಕಿಲೋಮೀಟರ್ ಆಗಿದ್ದು, ಈ ಮೇಲುಗಾಲುವೆಯ ನಿರ್ಮಾಣ ಕೆಲಸ 2018ರಲ್ಲಿ ಆರಂಭವಾಗಿ 2023ರಲ್ಲಿ ಪೂರ್ಣಗೊಂಡಿತು. ಈಗ ಅಂತಿಮ ಹಂತದ ಕೆಲಸಗಳು ಕೂಡ ಮುಕ್ತಾಯವಾಗಿವೆ.

ಈ ಯೋಜನೆಗೆ ರಾಷ್ಟ್ರಮಟ್ಟದ ಪ್ರಶಂಸೆ ಸಿಕ್ಕಿದ್ದು, ಭಾರತದೆಲ್ಲೆಡೆ ಜನರ ಗಮನ ಸೆಳೆದಿದೆ. ಚೇಳೂರಿನಿಂದ ಬೆಳ್ಳಾವಿವರೆಗೆ ಹರಡುವ ಈ ಕಾಲುವೆಯು ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆ ಆಗಿದ್ದು, ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೊಂಡೊಯ್ಯುವುದು ಇದರ ಉದ್ದೇಶ.

ಅಕ್ವಾಡಕ್ಟ್‌ನ ವೈಶಿಷ್ಟ್ಯಗಳು

  • ಎತ್ತರ: ಸುಮಾರು 120 ಅಡಿ (40 ಮೀಟರ್)
  • ನೀರಿನ ಸಾಗಣೆ ಸಾಮರ್ಥ್ಯ: 3300 ಕ್ಯೂಸೆಕ್
  • ವೆಚ್ಚ: ಸುಮಾರು ₹1203 ಕೋಟಿ

ವಿಳಂಬದ ಕಾರಣಗಳು: ಕೋವಿಡ್-19 ಮಹಾಮಾರಿ ಮತ್ತು ಭೂಸ್ವಾಧೀನ ತೊಂದರೆಗಳು ಈ ಕಾಲುವೆಯ ನಿರ್ಮಾಣವು ಕರ್ನಾಟಕದ ಜಲಸಂಪನ್ಮೂಲ ನಿರ್ವಹಣೆಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದ್ದು, ಆಧುನಿಕ ತಂತ್ರಜ್ಞಾನದ ದರ್ಶನವಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಮೆಚ್ಚಿದ್ದು, ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂತಹ ಯೋಜನೆಗಳು ರಾಜ್ಯದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಸಹಾಯಮಾಡಲಿವೆ ಎನ್ನುವ ನಿರೀಕ್ಷೆಯಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page