ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್‌ನ ಎರಡನೇ ದಿನ ಟೀಮ್ ಇಂಡಿಯಾ (Team India) ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಲ್ಲೇ ನಾಲ್ಕು ಬೌಂಡರಿ ಬಾರಿಸಿ ಭಾರತಕ್ಕೆ ಭರ್ಜರಿ ಆರಂಭ ನೀಡಿದ ಜೈಸ್ವಾಲ್ 22 ರನ್ ಗಳಿಸಿ ಔಟ್ ಆದರೂ, ಈ ಚಿಕ್ಕ ಇನಿಂಗ್ಸ್ ಮೂಲಕ ಹಲವು ದಾಖಲೆ ಬರೆದಿದ್ದಾರೆ.
ಬಾರ್ಡರ್-ಗವಾಸ್ಕರ್ ಸರಣಿಯ ಈ ಋತುವಿನಲ್ಲಿ ಯಶಸ್ವಿ ಜೈಸ್ವಾಲ್ 10 ಇನಿಂಗ್ಸ್‌ಗಳಲ್ಲಿ 391 ರನ್ ಬಾರಿಸಿ, ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆರಂಭಿಕ ಬ್ಯಾಟ್ಸ್ಮನ್‌ಗಳ ಪೈಕಿ ಆರನೇ ಸ್ಥಾನ ಪಡೆದಿದ್ದಾರೆ.
ಗರಿಷ್ಠ ರನ್ ಬಾರಿಸಿದ ಭಾರತೀಯರು
- ಮುರುಳಿ ವಿಜಯ್: 482 ರನ್
- ವೀರೇಂದ್ರ ಸೆಹ್ವಾಗ್: 464 ರನ್
- ಗೌತಮ್ ಗಂಭೀರ್: 463 ರನ್
- ಕೆಎಲ್ ರಾಹುಲ್: 393 ರನ್
- ಯಶಸ್ವಿ ಜೈಸ್ವಾಲ್: 391 ರನ್
ಟೆಸ್ಟ್ ಕ್ರಿಕೆಟ್‌ನ ಮೊದಲ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ 16 ರನ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಅತ್ಯುತ್ತಮ ಸಾಧನೆ
- ಯಶಸ್ವಿ ಜೈಸ್ವಾಲ್: 16 ರನ್ (ಆಸ್ಟ್ರೇಲಿಯಾ ವಿರುದ್ಧ, 2025)
- ಮೈಕೆಲ್ ಸ್ಲೇಟರ್: 16 ರನ್
- ಕ್ರಿಸ್ ಗೇಲ್: 16 ರನ್
- ಓಷಾದ ಫೆರ್ನಾಂಡೋ: 16 ರನ್
ಭಾರತೀಯ ಆಟಗಾರರ ಸಾಧನೆ
ಭಾರತದ ಟೆಸ್ಟ್ ಪಂದ್ಯಗಳ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪೈಕಿ ಯಶಸ್ವಿ ಜೈಸ್ವಾಲ್ ಮುಂಚೂಣಿಯಲ್ಲಿದ್ದಾರೆ.
- ಯಶಸ್ವಿ ಜೈಸ್ವಾಲ್: 16 ರನ್ (2025, ಸಿಡ್ನಿ)
- ರೋಹಿತ್ ಶರ್ಮಾ: 13 ರನ್ (2023, ನಾಗ್ಪುರ್)
- ವೀರೇಂದ್ರ ಸೆಹ್ವಾಗ್: 13 ರನ್ (2005, ಕೋಲ್ಕತ್ತಾ)
ಯಶಸ್ವಿ ಜೈಸ್ವಾಲ್ ಅವರ ಈ ಸಾಧನೆ, ಭವಿಷ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳಲು ಬದ್ಧತೆಯನ್ನು ತೋರಿಸುತ್ತದೆ.