back to top
20.6 C
Bengaluru
Tuesday, July 15, 2025
HomeEntertainmentಯುವ ನಟನಿಗೆ ವಂಚನೆ, ಬೆದರಿಕೆ ಆರೋಪ – ನಿರ್ದೇಶಕ Nanda Kishore ವಿರುದ್ಧ ಗಂಭೀರ ದೂರು

ಯುವ ನಟನಿಗೆ ವಂಚನೆ, ಬೆದರಿಕೆ ಆರೋಪ – ನಿರ್ದೇಶಕ Nanda Kishore ವಿರುದ್ಧ ಗಂಭೀರ ದೂರು

- Advertisement -
- Advertisement -

ಯುವ ನಟ ಶಬರೀಶ್ ಶೆಟ್ಟಿ, ನಿರ್ದೇಶಕ ನಂದ ಕಿಶೋರ್ ವಿರುದ್ಧ ಹಣಕಾಸು ವಂಚನೆ ಮತ್ತು ಬೆದರಿಕೆ ನೀಡಿದ ಆರೋಪ ಮಾಡಿದ್ದಾರೆ. ನಂದ ಕಿಶೋರ್ (Nanda Kishore) ಅವರು ತಮ್ಮಿಂದ ₹22 ಲಕ್ಷ ರೂಪಾಯಿ ಪಡೆದುಕೊಂಡು ಈಗ ತನಗೆ ಹಣವನ್ನೂ ಹಿಂದಿರುಗಿಸದೇ, ಬೆದರಿಸುತ್ತಿದ್ದಾರೆ ಎಂದು ಹೇಳಿದರು.

ಒಂಬತ್ತು ವರ್ಷಗಳ ಹಿಂದೆ ಜಿಮ್‌ನಲ್ಲಿ ಪರಿಚಯವಾದ ನಂದ ಕಿಶೋರ್, ಸಿಸಿಎಲ್ ನಲ್ಲಿ ಆಟವಾಡುವ ಅವಕಾಶ ಕೊಡ್ತೀನಿ ಎಂದು ಭರವಸೆ ನೀಡಿ ಹಣ ಕೇಳಿದ್ದಾರಂತೆ. ಶಬರೀಶ್ ಅವರು ತಮ್ಮ ಚಿನ್ನವನ್ನು ಅಡವಿಟ್ಟು ಹಣ ನೀಡಿದ್ದರು. ಆದರೆ ಈಗಲೂ ಹಣ ಹಿಂದಿರುಗಿಲ್ಲವಂತೆ.

ಹಣ ಕೇಳಿದಾಗ, ಸುದೀಪ್ ಸರ್ ಹೆಸರು ಹೇಳಿ ನನ್ನನ್ನು ಮೋಸ ಮಾಡಿದ್ದಾರೆ. “ಸಿನಿಮಾದಲ್ಲಿ ಅವಕಾಶ ಕೊಡ್ತೀನಿ” ಅಂತ ಹೇಳಿದರೂ ‘ಪೊಗರು’, ‘ರಾಣಾ’ ಸಿನಿಮಾಗಳಲ್ಲಿ ಅವಕಾಶ ನೀಡಲಿಲ್ಲ ಎಂದು ಶಬರೀಶ್ ದೂರಿದ್ದಾರೆ.

“200 ಗ್ರಾಂ ಚಿನ್ನ ಅಡವಿಟ್ಟು ಹಣ ಕೊಟ್ಟಿದ್ದೆ. ಬಡ್ಡಿಯ ಬಾಧೆಯಿಂದ ಆ ಚಿನ್ನ ಹರಾಜು ಆಗಿದೆ. ನಾನು ಬಡ್ಡಿಗೂ ಬಡ್ಡಿ ಕಟ್ಟುತ್ತಿದ್ದೆ. ಈಗ ನಾನು ರಾಮಧೂತ ಚಿತ್ರ ಮಾಡಿದ್ದೇನೆ. ಶೂಟಿಂಗ್ ಮುಗಿದ್ರೂ, ಹಣ ಇಲ್ಲದೇ ಚಿತ್ರ ರಿಲೀಸ್ ಆಗಿಲ್ಲ,” ಎಂದು ನೋವು ತೋರಿಸಿದ್ದಾರೆ.

ನಂದ ಕಿಶೋರ್ ಹಣ ವಾಪಸ್ ಕೊಡುವ ಉದ್ದೇಶವಿಲ್ಲದ ಕಾರಣ, ಅವರು ಫಿಲ್ಮ್ ಚೇಂಬರ್‌ಗೆ ದೂರು ಕೊಡುತ್ತೇನೆ, ಅಗತ್ತಾದರೆ ಕಾನೂನು ಕ್ರಮಕ್ಕೂ ಮುಂದಾಗುತ್ತೇನೆ ಎಂದಿದ್ದಾರೆ. “ಶಿವಣ್ಣ, ಸುದೀಪ್ ಸರ್ ಇವರ ಗಮನಕ್ಕೂ ತರ್ತೀನಿ” ಎಂದು ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page