New Delhi: ವಿಶ್ವಪ್ರಸಿದ್ಧ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ (Ustad Zakir Hussain) ಅವರು ಹೃದಯ ಸಮಸ್ಯೆಯ ಕಾರಣವಾಗಿ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 73ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಅಮೆರಿಕಾದಲ್ಲಿ (America) ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಜಾಕೀರ್ ಹುಸೇನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಕುಟುಂಬಸ್ಥರು ಅವರ ನಿಧನವನ್ನು ಘೋಷಿಸಿದ್ದಾರೆ.
ಜಾಕೀರ್ ಹುಸೇನ್ ಅವರ ತಂದೆ, ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ, ತಬಲಾ ಕಲೆಗೆ ಮಹತ್ವದ ಕೊಡುಗೆ ನೀಡಿದವರು. ಜಾಕೀರ್ ಹುಸೇನ್ ಅವರು ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಲ್-ಸ್ಟಾರ್ ಗ್ಲೋಬಲ್ Concertನಲ್ಲಿ (All-Star Global Concert) ಪಾಲ್ಗೊಳ್ಳಲು ಆಹ್ವಾನಿತನಾದ ಮೊದಲ ಭಾರತೀಯ ತಬಲಾ ವಾದಕರಾಗಿ ಅವರು ಖ್ಯಾತಿ ಗಳಿಸಿದ್ದರು. ಜಾಕೀರ್ ಹುಸೇನ್ ಅವರ ಅಕಾಲಿಕ ನಿಧನ ಸಂಗೀತ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ.