
Chikkaballapur : 2024 ಏಪ್ರಿಲ್ ರಿಂದ 2025 ಮಾರ್ಚ್‌ವರೆಗೆ ಜಿಲ್ಲೆಯಾದ್ಯಂತ 10 ತಾಯಿ ಮರಣಗಳು ಸಂಭವಿಸಿದ್ದು, ಮುಂದೆ ಇವು ಶೂನ್ಯಗೊಳಿಸಲು (Zero Maternal mortality vaccine drive) ಆರೋಗ್ಯ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತಾಯಿ ಮರಣ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸೂಚಿಸಿದ್ದಾರೆ.
ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ ತಲಾ 2, ಚಿಂತಾಮಣಿ 3 ಹಾಗೂ ಬಾಗೇಪಲ್ಲಿ ತಾಲ್ಲೂಕಿನಲ್ಲಿ 1 ತಾಯಿ ಮರಣ ದಾಖಲಾಗಿದ್ದು ಈ ಎಲ್ಲ ಪ್ರಕರಣಗಳನ್ನು ವೈದ್ಯಾಧಿಕಾರಿಗಳೊಂದಿಗೆ ಸಮೀಕ್ಷಿಸಲಾಗಿದೆ. ಲಸಿಕಾ ಅಭಿಯಾನವನ್ನು 24ರಿಂದ 30 ಏಪ್ರಿಲ್‌ವರೆಗೆ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದ್ದು, ಎಲ್ಲ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸಹಕಾರ ನೀಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಪ್ರತಿ ಗುರುವಾರ ವಿಶೇಷ ಲಸಿಕಾ ದಿನ, ಸಮುದಾಯ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ನಿರ್ಮಾಣ ಸ್ಥಳಗಳಲ್ಲಿ ಮೊಬೈಲ್ ಲಸಿಕಾ ವಾಹನ ಬಳಸಿ ಲಸಿಕೆ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಡಾ. ಮಹೇಶ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ತಾಯಿ ಮರಣ ತಡೆಯಲು ಗಂಭೀರ ಕ್ರಮ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.