Bengaluru: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ED) ಜಾರಿಗೊಳಿಸಿದ್ದ ಸಮನ್ಸ್ ಹೈಕೋರ್ಟ್ (High Court) ರದ್ದುಪಡಿಸಿದೆ. ಪಿಎಂಎಲ್ಎ ಕಾಯ್ದೆಯಡಿ ನಟೇಶ್ ವಿರುದ್ಧ ನಡೆದ ಶೋಧನೆಯೂ ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದೆ.
ನಟೇಶ್ ನೀಡಿದ ಹೇಳಿಕೆಯನ್ನು ಸಹ ಹೈಕೋರ್ಟ್ ಅಮಾನ್ಯಗೊಳಿಸಿದ್ದು, ಅವರ ವಿರುದ್ಧ ಯಾವುದೇ ಅಧಿಸೂಚಿತ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಡಾ ಹಗರಣದ ಸಂಬಂಧ ನಟೇಶ್ ವಿರುದ್ಧ ನಂಬಲರ್ಹ ಆರೋಪಗಳಿಲ್ಲವೆಂದು ನ್ಯಾಯಮೂರ್ತಿ ಹೇಮಂತ ಚಂದನಗೌಡ ತೀರ್ಪು ನೀಡಿದ್ದಾರೆ.
ಕ್ರಮ ನ್ಯಾಯಸಮ್ಮತವಾಗಿರಬೇಕು” ಎಂದು ಒತ್ತಿಹೇಳಿದ್ದು, ಏಕಪಕ್ಷೀಯ ಶೋಧನೆ ಖಾಸಗಿತನದ ಹಕ್ಕಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟಿದೆ. ಸಾಕ್ಷ್ಯಗಳಿಲ್ಲದಿದ್ದರೂ ನಟೇಶ್ ಅವರನ್ನು ಶೋಧನೆಗೆ ಒಳಪಡಿಸಲಾಗಿದೆ ಎಂದು ಕಾನೂನುಬಾಹಿರತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಮುಡಾ ಹಗರಣದ ತನಿಖೆ ಸಿಬಿಐಗೆ ವಹಿಸುವ ಕುರಿತು ನಿರ್ಧಾರ ಬಾಕಿ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಹೋರಾಟ ಮುಂದುವರಿದಿದ್ದು, ಹೈಕೋರ್ಟ್ ಈ ಸಂಬಂಧ ತೀರ್ಪು ಕಾಯ್ದಿರಿಸಿದೆ. ಈ ಮಧ್ಯೆ, ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ವರದಿ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.
ಇದೇ ಸಂದರ್ಭ, ಹಣಕಾಸು ಅವ್ಯವಹಾರ ಸಂಬಂಧ ಇಡಿ ತನಿಖೆ ಮುಂದುವರಿದಿದೆ. ನಟೇಶ್ ಅವರಿಗೆ ನೀಡಿದ್ದ ಸಮನ್ಸ್ ಹೈಕೋರ್ಟ್ ರದ್ದುಗೊಳಿಸಿದರೂ, ಮುಂದಿನ ಹಂತಗಳಲ್ಲಿ ಇಡಿ ತನಿಖೆ ಹೇಗೆ ಸಾಗುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.