ಜಾರ್ಜಿಯಾದ (Georgia) ರೆಸಾರ್ಟ್‌ನಲ್ಲಿ ಕಾರ್ಬನ್ ಮಾನಾಕ್ಸೈಡ್ (carbon monoxide) ವಿಷದಿಂದ 11 ಭಾರತೀಯರು ಸೇರಿ 12 ಮಂದಿ ಸಾವನ್ನಪ್ಪಿದ್ದಾರೆ. ಗುಡೌರಿಯ ರೆಸ್ಟೋರೆಂಟ್ ನ ಎರಡನೇ ಮಹಡಿಯಲ್ಲಿನ ಮಲಗುವ ಕೋಣೆಗಳಲ್ಲಿ ಅವರ ಶವಗಳು ಪತ್ತೆಯಾಗಿವೆ. ಅವರು ರೆಸ್ಟೋರೆಂಟ್ ನ ಉದ್ಯೋಗಿಗಳು ಎಂದು ತಿಳಿದುಬಂದಿದೆ.
ಇವರು ಕಾರ್ಬನ್ ಮಾನಾಕ್ಸೈಡ್ (carbon monoxide) ವಿಷದಿಂದ ಸಾವನ್ನಪ್ಪಿದ್ದು, ಇದೇ ರೀತಿಯ ಘಟನೆ ಅಲ್ಲಿನ ಜನರೇಟರ್‍ನಿಂದ ಉಂಟಾಗಿದೆಯೆಂದು ಶಂಕಿಸಲಾಗಿದೆ. ಶುಕ್ರವಾರ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಜನರೇಟರ್ ಪ್ರಾರಂಭಿಸಲಾಯಿತು ಎಂದು ಪ್ರಾಥಮಿಕ ತನಿಖೆ ವರದಿ ಮಾಡಿದೆ.
ಜಾರ್ಜಿಯಾದಲ್ಲಿನ ಭಾರತೀಯ ಮಿಷನ್ 12 ಜನರಲ್ಲಿ 11 ಭಾರತೀಯರು ಇದ್ದರು ಎಂದು ದೃಢಪಡಿಸಿದೆ. ಪ್ರಾಥಮಿಕ ವರದಿಯಲ್ಲಿ, ಕಾರ್ಬನ್ ಮಾನಾಕ್ಸೈಡ್ ವಿಷದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಯಾವುದೇ ದೇಹದ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳು ಪತ್ತೆಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ತನಿಖೆ ಆರಂಭಿಸಿದ್ದು, ಫೋರೆನ್ಸಿಕ್ ಪರೀಕ್ಷೆಗೆ ಆದೇಶಿಸಲಾಗಿದೆ. 11 ಭಾರತೀಯರ ಸಾವಿಗೆ ಆಳವಾದ ದುಃಖ ವ್ಯಕ್ತಪಡಿಸಿದ ಭಾರತೀಯ ಮಿಷನ್, ಅವರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದೆ.