back to top
27.5 C
Bengaluru
Friday, August 29, 2025
HomeKarnatakaBelagaviCCB Police ನಿಂದ 2.73 ಕೋಟಿ ಅಕ್ರಮ ಹಣ ಜಪ್ತಿ

CCB Police ನಿಂದ 2.73 ಕೋಟಿ ಅಕ್ರಮ ಹಣ ಜಪ್ತಿ

- Advertisement -
- Advertisement -

Belagavi:ಮಹಾರಾಷ್ಟ್ರದಿಂದ (Maharashtra) ಕೇರಳಕ್ಕೆ (Kerala) ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಾಂತರ ರೂಪಾಯಿ ಹಣವನ್ನ ಬೆಳಗಾವಿ (Belagavi) ಸಿಸಿಬಿ ಪೊಲೀಸರು (CCB Police) ದಾಳಿ ಮಾಡಿ ಜಪ್ತಿ ಮಾಡಿದ್ದಾರೆ.

ಗೂಡ್ಸ್ ವಾಹನದಲ್ಲಿ (Goods Vehicle) ಮಾರ್ಪಾಡು ಮಾಡಿ 2.73 ಕೋಟಿ ರೂಪಾಯಿ ಹಣವನ್ನ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿಯ ಅನ್ವಯ ದಾಳಿ ನಡೆಸಿದ ಬೆಳಗಾವಿ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಂಗ್ಲಿ ಮೂಲದ ಸಚಿನ್ ಮೆನಕುದಳೆ, ಮಾರುತಿ ಮಾರಗುಡೆ ಎಂಬುವವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದಿಂದ ಕೇರಳಕ್ಕೆ ತೆಗೆದುಕೊಂಡು ಹೋಗ್ತಿದ್ದ ಹಣ ಹವಾಲ್ ಹಣಕ್ಕೆ ಸಂಬಂಧಿಸಿದ್ದು ಎಂಬ ಶಂಕೆ ವ್ಯಕ್ತವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಮೂಲಕವೇ ಅಕ್ರಮ ಹಣ ಸಾಗಿಸಲಾಗುತ್ತಿತ್ತು.

ಆರೋಪಿಗಳು ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನಕ್ಕೆ ಕೆಲವೊಂದು ಮಾರ್ಪಡು ಮಾಡಿ ಹಣವನ್ನು ಸೇಫ್ ಮಾಡಿದ್ದಾರಂತೆ, ವಾಹನವನ್ನ ತಡೆದ ಸಿಸಿಬಿ ಪೊಲೀಸರು ಟಾಪ್ ಪರಿಶೀಲನೆ ನಡೆಸಿದ ವೇಳೆ ಹಣ ಇರೋದು ಪತ್ತೆಯಾಗಿದೆ.

CCB ಇನ್ಸ್ ಪೆಕ್ಟರ್ ನಂದೀಶ್ವರ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page