ಹೊಸ ತಂತ್ರಜ್ಞಾನ ಮತ್ತು ವಿಭಿನ್ನ ವೈಶಿಷ್ಟ್ಯಗಳೊಂದಿಗೆ 2025 ಹೋಂಡಾ ಡಿಯೋ (Honda Dio) ಸ್ಕೂಟರ್ ಬಿಡುಗಡೆಗೊಂಡಿದೆ. ಈ ಸ್ಕೂಟರ್ STD ಮತ್ತು DLX ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. ಡಿಯೋ STD ಬೆಲೆ ರೂ.74,930 (ಎಕ್ಸ್ ಶೋರೂಂ) ಮತ್ತು ಡಿಯೋ DLX ಬೆಲೆ ರೂ.85,648 (ಎಕ್ಸ್ ಶೋರೂಂ) ಆಗಿದೆ.
ಹೊಸ ಡಿಯೋ, OBID 2B ಮಾನದಂಡಗಳನ್ನು ಅನುಸರಿಸಿ ನವೀಕರಿಸಲಾಗಿದೆ. ಇದು ಪರ್ಲ್ ಇಗ್ನಿಯಸ್ ಬ್ಲಾಕ್, ಇಂಪೀರಿಯಲ್ ರೆಡ್, ಮ್ಯಾಟ್ ಮಾರ್ವೆಲ್ ಬ್ಲೂ ಮುಂತಾದ ಬಣ್ಣಗಳಲ್ಲಿ ಲಭ್ಯವಿದೆ. ಡಿಯೋದ ಆಯಾಮಗಳು 1808 ಮಿ.ಮೀ ಉದ್ದ, 723 ಎಂಎಂ ಅಗಲ, 1150 ಎಂಎಂ ಎತ್ತರ ಮತ್ತು 1260 ಎಂಎಂ ವ್ಹೀಲ್ ಬೇಸ್ ಗೊಳಗೊಂಡಿವೆ.
2025 ಹೋಂಡಾ ಡಿಯೋ 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಒಳಗೊಂಡಿದೆ, ಇದು 5.85 ಕಿಲೋವ್ಯಾಟ್ ಪವರ್ ಮತ್ತು 9.03 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಹೋಂಡಾ ಡಿಯೋ DLX ಮಾದರಿಯಲ್ಲಿ ಅಲಾಯ್ ವೀಲ್ ಗಳನ್ನು, USB ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಐಡ್ಲಿಂಗ್ ಸ್ಟಾಪ್ ಸಿಸ್ಟಮ್, 4.2-ಇಂಚಿನ TFT ಡಿಜಿಟಲ್ ಡಿಸ್ಪ್ಲೇ, ಮೈಲೇಜ್ ಇಂಡಿಕೇಟರ್, ಟ್ರಿಪ್ ಮೀಟರ್, ಮತ್ತು ಇಕೋ ಇಂಡಿಕೇಟರ್ ಮುಂತಾದ ಉಪಯುಕ್ತ ಫೀಚರ್ಸ್ ನೀಡಲಾಗಿದೆ.
2025 ಡಿಯೋ, OBID 2B-ಕಾಂಪ್ಲೈಂಟ್ ಎಂಜಿನ್ ಮತ್ತು ನವೀಕರಿಸಿದ ತಂತ್ರಜ್ಞಾನದಿಂದ ಉತ್ತಮ ಪರ್ಫಾರ್ಮೆನ್ಸ್ ಮತ್ತು ಮೈಲೇಜ್ ನೀಡುತ್ತದೆ. ಇದು ಭಾರತದಲ್ಲಿ ಯುವಜನತೆಯ ಶಕ್ತಿಯ ಪರಿಕಲ್ಪನೆಗೆ ತಕ್ಕ ಸ್ಕೂಟರ್ ಆಗಿದೆ.
ಹೋಂಡಾದ ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ ಅವರ ಪ್ರಕಾರ, 2025 ಡಿಯೋ ಹೊಸ ತಂತ್ರಜ್ಞಾನ ಮತ್ತು ಅದ್ಭುತ ಪರ್ಫಾರ್ಮೆನ್ಸ್‌ಗಳನ್ನು ಸಂಯೋಜಿಸಿ ಸ್ಕೂಟರ್ ಅನುಭವವನ್ನು ಮರುವ್ಯಾಖ್ಯಾನಿಸುವ ಗುರಿಯನ್ನು ಹೊಂದಿದೆ.