Home Business Bengaluru ಜನರಿಗೆ ಮತ್ತೊಂದು ದರ ಏರಿಕೆಯ ಶಾಕ್!

Bengaluru ಜನರಿಗೆ ಮತ್ತೊಂದು ದರ ಏರಿಕೆಯ ಶಾಕ್!

104
Auto fare hike

Bengaluru: ಮೆಟ್ರೋ ಹಾಗೂ ಬಸ್ ದರ ಏರಿಕೆಯ ಬಳಿಕ ಈಗ ಆಟೋ ಮೀಟರ್ ದರ (Auto fare hike) ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. ಇಂದು (ಮಾರ್ಚ್ 12) ಈ ಕುರಿತು ಮಹತ್ವದ ಸಭೆ ನಡೆಯಲಿದೆ.

ಆಟೋ ಚಾಲಕರು ಕನಿಷ್ಠ ದರವನ್ನು ₹30 ರಿಂದ ₹40ಕ್ಕೆ ಹಾಗೂ ಪ್ರತಿ ಕಿಲೋಮೀಟರ್ ದರವನ್ನು ₹15 ರಿಂದ ₹20ಕ್ಕೆ ಹೆಚ್ಚಿಸಲು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ವಿವಿಧ ಆಟೋ ಚಾಲಕರ ಸಂಘಟನೆಗಳು ಭಾಗವಹಿಸಲಿವೆ.

ಈ ಹಿಂದೆ, ಜನವರಿಯಲ್ಲಿ ರಾಜ್ಯ ಬಸ್ ದರ ಹಾಗೂ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ದರ ಹೆಚ್ಚಳವಾಗಿತ್ತು. ಈಗ ಮಾರ್ಚ್‌ನಲ್ಲಿ ಆಟೋ ದರ ಏರಿಕೆಯಾಗುವ ನಿರೀಕ್ಷೆ ಜನತೆಗೆ ಮತ್ತೊಂದು ಬಜೆಟ್ ಹೊಡೆತ ನೀಡಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page