
ನವದೆಹಲಿ: ಲಾಭದಾಯಕ ಉದ್ಯೋಗಗಳ ಆಮಿಷಕ್ಕೆ ಬಲಿಯಾಗಿ ವಂಚನೆಯ ಜಾಲದಲ್ಲಿ ಸಿಲುಕಿದ್ದ 283 ಭಾರತೀಯರನ್ನು (Indians) ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಈ ವ್ಯಕ್ತಿಗಳನ್ನು ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಲಾಗುತ್ತಿತ್ತು ಎಂದು ವರದಿಯಾಗಿದೆ.
Myanmar ಮತ್ತು ಥೈಲ್ಯಾಂಡ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳ ಸಹಯೋಗದಿಂದ ಈ ಕಾರ್ಯಾಚರಣೆಯನ್ನು ನಡೆಸಿದವು. ಥೈಲ್ಯಾಂಡ್ ನ ಮೇ Mae Sotನಿಂದ ಭಾರತೀಯ ವಾಯುಪಡೆಯ (IAF) ವಿಮಾನದ ಮೂಲಕ ಈ ನಾಗರಿಕರನ್ನು ಸೋಮವಾರ ಭಾರತಕ್ಕೆ ಮರಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.