ನವರಾತ್ರಿಯ ಆರಾಧನೆಯಲ್ಲಿ ಒಂಬತ್ತು ಅವತಾರಗಳು ಬಹಳ ಮಹತ್ವದ ಪಾತ್ರವನ್ನು ವಹಿಸಿವೆ. ಒಂದೊಂದು ದಿನವನ್ನೂ ಒಂದೊಂದು ದೇವಿಯ ಅವತಾರಕ್ಕೆ ಮೀಸಲಿಡಲಾಗಿದೆ. ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ (Brahmacharini) ಮೀಸಲಿಡಲಾಗಿದೆ.
ನವರಾತ್ರಿಯ ಎರಡನೇ ದಿನದಂದು, (second day of Navratri) ಭಕ್ತರು ಹಸಿರು (green) ಬಣ್ಣವನ್ನು ಧರಿಸಲು ಪ್ರೋತ್ಸಾಹಿಸಲಾಗುತ್ತದೆ, ಇದು ಪ್ರಕೃತಿ, ನವೀಕರಣ ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಸಿರು ಶಾಂತಿಯನ್ನು ಪ್ರೇರೇಪಿಸುತ್ತದೆ ಮತ್ತು ಧನಾತ್ಮಕ ಕಂಪನಗಳನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಈ ದಿನದಂದು ಹಸಿರು ಧರಿಸುವುದರಿಂದ ಮಾತೆ ಬ್ರಹ್ಮಚಾರಿಣಿಯ (Brahmacharini) ಶಾಂತ, ಶ್ರದ್ಧಾಭರಿತ ಸ್ವಭಾವದೊಂದಿಗೆ ಭಕ್ತರನ್ನು ಒಟ್ಟುಗೂಡಿಸುತ್ತದೆ. ಇದು ದೇವಿಯನ್ನು ಗೌರವಿಸಲು ಮತ್ತು ಆಂತರಿಕ ಶಾಂತಿ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಭಾವನಾತ್ಮಕ ಸ್ಥಿರತೆಗಾಗಿ ಅವಳ ಆಶೀರ್ವಾದವನ್ನು ಪಡೆಯುವ ಒಂದು ಮಾರ್ಗವಾಗಿದೆ.
ಬ್ರಹ್ಮಚಾರಿಣಿಯ ಕಥೆಯನ್ನ ನೋಡುವುದಾದರೆ ಅರ್ಥ ಪವಿತ್ರ ಧಾರ್ಮಿಕ ಜ್ಞಾನವನ್ನು ಹೊಂದಿರುವ ಮಹಿಳೆ ಎಂಬ ಅರ್ಥ ಇದೆ. ಮುಖ್ಯವಾಗಿ ಪುರಾಣಗಳ ಪ್ರಕಾರ, ಶಿವನನ್ನು ಪಡೆಯಲು ಬ್ರಹ್ಮಚಾರಿಣಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡ್ತಾಳೆ ಎನ್ನುವ ಕಥೆ ಇದೆ.
ಈ ದಿನ “ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ” ಮಂತ್ರ ದೊಂದಿಗೆ ಬ್ರಹ್ಮಚಾರಿಣಿ ದೇವಿಯ ಜೊತೆಗೆ ಶಿವನನ್ನು ಪೂಜಿಸಲಾಗುತ್ತದೆ. ಇನ್ನು ಈ ದಿನ ದೇವರ ವಿಗ್ರಹಗಳಿಗೆ ಕಲಶದಲ್ಲಿ ಮಲ್ಲಿಗೆ ಹೂವು, ಅಕ್ಕಿ ಮತ್ತು ಶ್ರೀಗಂಧವನ್ನು ಅರ್ಪಿಸಬೇಕು. ಹಾಲು, ಮೊಸರು ಮತ್ತು ಜೇನುತುಪ್ಪವನ್ನು ನೈವೇದ್ಯ ಮಾಡಬೇಕು.
ಪ್ರಾರ್ಥನಾ-ದಧಾನ ಕರ ಪದ್ಮಾಭ್ಯಾಮಕ್ಷಮಾಲಾ ಕಮಂಡಲು
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ.