ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಗ್ರಾಹಕರ ಆಸಕ್ತಿಗೆ ತಕ್ಕಂತೆ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಹಳೆಯ ಫೋನ್ ಬಳಸಿ ಬೇಸರಗೊಂಡಿದ್ದರೆ, ಈ ವಾರ Poco, Vivo and Nothing brandಗಳ ಹೊಸ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿವೆ.
ಪೊಕೊ ಹೊಸ ಬಜೆಟ್ ಫೋನ್
ಪೊಕೊ ಕಂಪನಿಯ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಫೋನ್ ವೈಶಿಷ್ಟ್ಯಗಳು.
- ಪ್ರೊಸೆಸರ್: ಸ್ನಾಪ್‌ಡ್ರಾಗನ್ 4ನೇ ಜನರೇಷನ್ 2
- RAM: 6 ಜಿಬಿ ವರ್ಚುವಲ್ RAM
- ಡಿಸ್ಪ್ಲೇ: 6.88-ಇಂಚು, 120Hz ರಿಫ್ರೆಶ್ ದರ
- ಕ್ಯಾಮೆರಾ: 50MP ಹಿಂಬದಿ, 8MP ಸೆಲ್ಫಿ
- ಬ್ಯಾಟರಿ: 5160mAh, 33W ಫಾಸ್ಟ್ ಚಾರ್ಜಿಂಗ್
- ಅಂದಾಜು ಬೆಲೆ: ₹10,000 ಕ್ಕಿಂತ ಕಡಿಮೆ
ನಥಿಂಗ್ ಫೋನ್ 3a ಮತ್ತು 3a ಪ್ರೊ
ನಥಿಂಗ್ ಬ್ರಾಂಡ್ ಹೊಸ ಫೋನ್ ಮಾರ್ಚ್ 4 ಮಧ್ಯಾಹ್ನ 3:30ಕ್ಕೆ ಬಿಡುಗಡೆಯಾಗಲಿದೆ. ಈ ಫೋನಿನ ನಿರೀಕ್ಷಿತ ವೈಶಿಷ್ಟ್ಯಗಳು.
- ಪ್ರೊಸೆಸರ್: ಸ್ನಾಪ್‌ಡ್ರಾಗನ್ 7s ಜೆನ್ 3
- ಕ್ಯಾಮೆರಾ: 50MP ಹಿಂಬದಿ
- ಬ್ಯಾಟರಿ: 5000mAh
- ಬೆಲೆ: ₹23,000 – ₹30,000
ವಿವೋ T4x 5G
ವಿವೋ ಫೋನ್ ಮಾರ್ಚ್ 5 ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಇದರ ಮುಖ್ಯ ವೈಶಿಷ್ಟ್ಯಗಳು
- ಬ್ಯಾಟರಿ: 6500mAh, 44W ಫಾಸ್ಟ್ ಚಾರ್ಜಿಂಗ್
- ಬ್ಯಾಟರಿ ಲೈಫ್: 5 ವರ್ಷಗಳ ಬ್ಯಾಕಪ್
- ವೀಡಿಯೋ ಪ್ಲೇಬ್ಯಾಕ್: 40 ಗಂಟೆಗಳ ಸಪೋರ್ಟ್
- ಬೆಲೆ: ₹13,000 ಕ್ಕಿಂತ ಕಡಿಮೆ
ಇದೇ ವಾರ ಹೊಸ ಮೊಬೈಲ್ ಖರೀದಿಸಲು ಯೋಜನೆ ಹೊಂದಿದ್ದರೆ, ಈ ಆಯ್ಕೆಗಳು ನಿಮಗೆ ಸಹಾಯ ಮಾಡಬಹುದು!