Search
WhatsApp alerts

Home › News

ಭಾರತದಲ್ಲಿ ಬಿಡುಗಡೆ: HMD ಟಚ್ 4G ಹೈಬ್ರಿಡ್ ಫೋನ್

administrator · Published

HMD Touch 4G Hybrid Phone

Bengaluru: ದೇಶದ ಮೊದಲ ಹೈಬ್ರಿಡ್ ಫೋನ್ ಆಗಿ HMD ಟಚ್ 4G (HMD Touch 4G Hybrid Phone) ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಫೀಚರ್ ಫೋನ್ ಮತ್ತು ಸ್ಮಾರ್ಟ್‌ಫೋನ್ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಫೋನ್ 3.2-ಇಂಚಿನ ಟಚ್‌ಸ್ಕ್ರೀನ್, ಡ್ಯುಯಲ್ ಸಿಮ್ ಬೆಂಬಲ ಮತ್ತು ಹಿಂಬದಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಜೊತೆಗೆ ಫ್ಲ್ಯಾಶ್ ಯೂನಿಟ್‌ನೊಂದಿಗೆ ಬರುತ್ತದೆ. 64MB RAM ಮತ್ತು 128MB ಸಂಗ್ರಹಣೆಯೊಂದಿಗೆ ಫೋನ್ S30+ ಟಚ್ ಬಳಕೆದಾರ ಇಂಟರ್ಫೇಸ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ತುರ್ತು ಕರೆಗಾಗಿ ಕ್ವಿಕ್-ಕಾಲ್ ಬಟನ್ ಕೂಡ ಇದೆ.

ಬೆಲೆ ಮತ್ತು ಲಭ್ಯತೆ: ಭಾರತದಲ್ಲಿ HMD ಟಚ್ 4G ಬೆಲೆ 3,999 ರೂ. ಆಗಿದೆ. ಸಯಾನ್ ಮತ್ತು ಗಾಢ ನೀಲಿ ಬಣ್ಣಗಳಲ್ಲಿ HMD ಇಂಡಿಯಾ website ಮೂಲಕ ಮಾರಾಟವಾಗುತ್ತಿದೆ. ಶೀಘ್ರದಲ್ಲೆ ಇದನ್ನು ಇ-ಕಾಮರ್ಸ್ ಮತ್ತು ಆಯ್ದ offline ಅಂಗಡಿಗಳಿಂದ ಖರೀದಿಸಬಹುದಾಗಿದೆ.

ಪ್ರಮುಖ ಫೀಚರ್ಸ್

  • 3.2-ಇಂಚಿನ 2.5D ಟಚ್-ಸ್ಕ್ರೀನ್ ಡಿಸ್ಪ್ಲೇ
  • Unisoc T127 chipset, 64MB RAM ಮತ್ತು 128MB ಸಂಗ್ರಹಣೆ
  • ಡ್ಯುಯಲ್ ನ್ಯಾನೋ ಸಿಮ್ ಬೆಂಬಲ; ಮೈಕ್ರೋ SD ಕಾರ್ಡ್ ಮೂಲಕ 32GB ವರೆಗೆ ವಿಸ್ತರಣೆ
  • S30+ ಟಚ್ ಇಂಟರ್ಫೇಸ್ ಮತ್ತು ಕ್ಲೌಡ್ ಆಪ್ಸ್ ಸಪೋರ್ಟ್
  • ಕ್ರಿಕೆಟ್ ಸ್ಕೋರ್, ಸುದ್ದಿ, ಹವಾಮಾನ ನವೀಕರಣಗಳು, HTML5 ಆಟಗಳು
  • ಹಿಂಬದಿ 2 ಮೆಗಾಪಿಕ್ಸೆಲ್ ಕ್ಯಾಮೆರಾ + LED ಫ್ಲ್ಯಾಷ್; ಮುಂಭಾಗ 0.3 ಮೆಗಾಪಿಕ್ಸೆಲ್ VGA ಕ್ಯಾಮೆರಾ
  • ತುರ್ತು ಕರೆಗಾಗಿ ಕ್ವಿಕ್-ಕಾಲ್ ಬಟನ್
  • ಎಕ್ಸ್ಪ್ರೆಸ್ ಚಾಟ್ ಮೂಲಕ Android ಮತ್ತು iOS ಜೊತೆ ಪಠ್ಯ ಮತ್ತು ವೀಡಿಯೊ ಕರೆ
  • ಸಂಪರ್ಕ ಮತ್ತು ಬ್ಯಾಟರಿ
  • 4G LTE, VoLTE, Wi-Fi 802.11, ಬ್ಲೂಟೂತ್ 5.0, GPS, Beidou, USB ಟೈಪ್-C
  • 2,000mAh ಬದಲಾಯಿಸಬಹುದಾದ ಬ್ಯಾಟರಿ; ಒಂದೇ ಚಾರ್ಜ್‌ನಲ್ಲಿ 30 ಗಂಟೆಗಳ ಬ್ಯಾಟರಿ ಆಯುಷ್ಯ

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page