
Bengaluru: ಕರ್ನಾಟಕದ 125 ಸರ್ಕಾರಿ (Government) ಸಾರ್ವಜನಿಕ ಉದ್ದಿಮೆಗಳ ಪೈಕಿ 16 ಉದ್ದಿಮೆಗಳ ಬಾಗಿಲು ಮುಚ್ಚಿವೆ ಎಂದು ಸರ್ಕಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದೆ. ಪರಿಷತ್ ಸದಸ್ಯರಾದ ಟಿಎ ಶರವಣ ಮತ್ತು ಕೆಎಸ್ ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, BMTC, KSRTC ಹಾಗೂ ಐದು ವಿದ್ಯುತ್ ಸರಬರಾಜು ಕಂಪನಿಗಳು ಸೇರಿದಂತೆ 34 ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿದ್ದಾರೆ ಎಂದು ಮಾಹಿತಿ ನೀಡಿದೆ.
ನಷ್ಟದ ಹಿನ್ನೆಲೆಯಲ್ಲಿ 16ಕ್ಕೂ ಹೆಚ್ಚು ಸರ್ಕಾರಿ ಉದ್ದಿಮೆಗಳ ಬಾಗಿಲು ಮುಚ್ಚಲಾಗಿದೆ. ಬೆಂಗಳೂರು ಉಪನಗರ ರೈಲು ಕಂಪನಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣ ರೈಲು ಸಂಪರ್ಕ ನಿಗಮವೂ ಬಂದ್ ಆಗಿವೆ. ಭಾರೀ ಆರ್ಥಿಕ ನಷ್ಟದಲ್ಲಿರುವ ಈ ಸಂಸ್ಥೆಗಳ ಕುರಿತು ಮೌಲ್ಯಮಾಪನ ನಡೆಸಲು ಸರ್ಕಾರ ಸೂಚಿಸಿದೆ.
ಬುಡಾ ಅಡಿಯಲ್ಲಿ ಎಲ್ಲ ಲೇಔಟ್ ಅನುಮತಿಗಳನ್ನು ಸ್ಥಗಿತಗೊಳಿಸಲಾಗಿದೆ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಾನುಸಾರ ಸಭೆ ನಡೆಯುತ್ತಿಲ್ಲ. ಶಾಸಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಇದೀಗ ಕಮೀಷನರ್ ಇಲ್ಲದೇ ಯಾವುದೇ ಕೆಲಸ ಆಗುತ್ತಿಲ್ಲ.
ಬುಡಾದ ಕೊನೆಯ ಸಭೆ 2024ರ ಜುಲೈನಲ್ಲಿ ನಡೆದಿದ್ದು, ಬಳಿಕ ಮತ್ತೊಂದು ಸಭೆ ನಡೆದಿಲ್ಲ. ಲೋಕಾಯುಕ್ತ ದಾಳಿಯಲ್ಲಿ 6 ಜನರನ್ನು ಬಂಧಿಸಲಾಗಿದ್ದು, ತನಿಖೆಯ ಹಿನ್ನಲೆಯಲ್ಲಿ ಯಾವುದೇ ಪ್ರಕ್ರಿಯೆ ನಡೆಸಲು ಅನುಮತಿ ನೀಡಲಾಗಿಲ್ಲ. ಈ ಬಗ್ಗೆ ಸರಿಯಾಗಿ ತನಿಖೆ ನಡೆಸಲು ಸರ್ಕಾರ ಆದೇಶ ನೀಡಿದೆ. ಅಧಿವೇಶನ ಮುಗಿದ ಬಳಿಕ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.